ಶಿರಸಿ: ಸರ್ವಜ್ಞೇಂದ್ರ ಸರಸ್ವತಿ ಮಹಾಸಂಸ್ಥಾನ ಸ್ವರ್ಣವಲ್ಲೀ ಇವರು ನಡೆಸುವ ಹೊಸ್ತೋಟ ಮಂಜುನಾಥ ಭಾಗ್ವತ ಅವರ ಕನಸಿನ ಕೂಸಾದ ಯಕ್ಷ ಶಾಲ್ಮಲಾ ವತಿಯಿಂದ ನಡೆದ ಯಕ್ಷೋತ್ಸವದಲ್ಲಿ ಲಯನ್ಸ್ ಶಾಲೆಯ ಮೂರು ತಾಳಮದ್ದಳೆ ತಂಡಗಳು ಭಾಗವಹಿಸಿ ತಮ್ಮ ಪ್ರದರ್ಶನವನ್ನು ನೀಡಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ‘ಭಕ್ತ ಮಾರ್ಕಾಂಡೇಯ’ ಮತ್ತು ‘ನಚಿಕೇತೋಪಾಖ್ಯಾನ’ ಎಂಬ ಆಖ್ಯಾನಗಳನ್ನು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ‘ಏಕಲವ್ಯ’ ಎಂಬ ಆಖ್ಯಾನವನ್ನು ಪ್ರಸ್ತುತಪಡಿಸಿ ನಿರ್ಣಾಯಕರ ಮನ ಗೆದ್ದಿದ್ದಾರೆ. ನಚಿಕೇತೋಪಾಖ್ಯಾನ ಎಂಬ ಆಖ್ಯಾನದ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಸ್ವರ್ಣವಲ್ಲೀ ಶ್ರೀಗಳವರ ಕೃಪಾಶೀರ್ವಾದಕ್ಕೆ ಪಾತ್ರವಾಗಿದೆ. ಯಕ್ಷೋತ್ಸವದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ತಂಡಗಳಿಗೆ ಮಾರ್ಗದರ್ಶನವನ್ನು ಶಶಾಂಕ್ ಹೆಗಡೆ, ಮಂಜುನಾಥ ಭಟ್ಟ , ಶ್ರೀಮತಿ ಸೀತಾ ಭಟ್ಟ, ಶ್ರೀಮತಿ ವಿದ್ಯಾವತಿ ಭಟ್ಟ ಹಾಗೂ ಪಾಲಕರು ಶಿಕ್ಷಕ ವೃಂದ ನೀಡಿರುತ್ತಾರೆ.