Slide
Slide
Slide
previous arrow
next arrow

TSS ಗೊಬ್ಬರದಲ್ಲಿ ರೈತರಿಗೆ ಮೋಸ ಆರೋಪ; ಶೇರು ಸದಸ್ಯರ ಆಕ್ರೋಶ

300x250 AD

ಟಿಎಸ್ಎಸ್ ನಲ್ಲಿ ಖರೀದಿಸಿದ ಗೊಬ್ಬರ ಕಳಪೆಯೆಂದು ಸಾಬೀತು | ಸರಕಾರಿ ಮಾನ್ಯತೆಯಿರುವ ಲ್ಯಾಬ್’ನಿಂದ ರಿಪೋರ್ಟ್ | ಪೋಲೀಸರಿಗೆ ದೂರರ್ಜಿ ದಾಖಲು

ಶಿರಸಿ: ಕಳೆದೊಂದು ವರ್ಷದ ನಂತರ ಗೋಪಾಲಕೃಷ್ಣ ವೈದ್ಯ ನೇತೃತ್ವದ ನೂತನ ಆಡಳಿತ ಮಂಡಳಿ ಅಧಿಕಾರಕ್ಕೇರಿದ ನಂತರ ಸದಾ ವಿವಾದಗಳಿಂದನೇ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಟಿಎಸ್ಎಸ್ ಇದೀಗ ರೈತರಿಗೆ ಇನ್ನೊಂದು ಭಾರೀ ಪ್ರಮಾಣದ ಮೋಸ ಮಾಡಿರುವ ಆರೋಪ ಬಂದಿದೆ.

ರೈತರಿಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನುಮತ್ತು ಮುಖ್ಯವಾಗಿ ಕೃಷಿ ಸಂಬಂಧಿತ ಪರಿಕರಗಳನ್ನು ಸೂಪರ್ ಮಾರ್ಕೆಟ್ ವ್ಯವಸ್ಥೆಯಡಿಯಲ್ಲಿ ನೀಡುತ್ತಾ ಬಂದಿರುವ ಟಿಎಸ್ಎಸ್ ಈ ಮೊದಲು ತನ್ನ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ದರದ ಕುರಿತಾಗಿ ರೈತರ ಮತ್ತು ಸ್ಥಳೀಯರ ಮನಗೆದ್ದಿತ್ತು. ಹಾಗಾಗಿಯೇ ರೈತರೂ ಕೂಡ ಏನೇ ಇದ್ದರೂ ಟಿಎಸ್ಎಸ್ ಇದೆಯಲ್ಲ ಎಂಬ ಭಾವನೆ ಹೊಂದಿದ್ದರು. ಆದರೆ ಕಳೆದೊಂದು ವರ್ಷದಿಂದ ಸದಾ ವಯಕ್ತಿಕ ದ್ವೇಷ ರಾಜಕಾರಣ, ಹತ್ತಿಕ್ಕುವ ಮನಸ್ಥಿತಿ ಮತ್ತು ನಿರಂತರವಾಗಿ ಒಂದಿಲ್ಲೊಂದು ವಿವಾದಗಳಿಂದನೇ ಗುರುತಿಸಿಕೊಂಡಿರುವ ಮತ್ತೀಘಟ್ಟದ ಗೋಪಾಲಕೃಷ್ಣ ವೈದ್ಯ ನೇತೃತ್ವದ ಹಾಲಿ ಆಡಳಿತ ಮಂಡಳಿ ಕಾರ್ಯವೈಖರಿ ಕುರಿತಾಗಿ ಈಗೀಗ ಅಪಸ್ವರ, ಆಕ್ರೋಶಗಳು ಹೆಚ್ಚಾಗುತ್ತಿವೆ ಎಂಬ ಮಾತುಗಳು ಶೇರು ಸದಸ್ಯರಿಂದಲೇ ಕೇಳಿ ಬಂದಿದೆ.

ಸಂಸ್ಥೆಯ ಅಭಿವೃದ್ಧಿ, ರೈತರ ಹಿತಕ್ಕಾಗಿ ಸಮಯ ನೀಡಿ ಕೆಲಸ ಮಾಡಬೇಕಿದ್ದ ನೂತನ ಸಮಿತಿಗೆ ಮತ್ತೊಬ್ಬರ ಮೇಲೆ ಕೇಸ್ ಹಾಕುವುದು, ನ್ಯಾಯಾಲಯಗಳ ಸುತ್ತುವುದು, ವಿವಾದ ಮೈಮೇಲೆ ಎಳೆದುಕೊಳ್ಳುವುದೇ ಕೆಲಸವಾಗಿಬಿಟ್ಟಿದೆ ಎಂಬುದು ಸಂಘದ ಶೇರು ಸದಸ್ಯರ ಆರೋಪ ಮತ್ತು ಆಕ್ರೋಶವಾಗಿದೆ. ಹೀಗಿರುವಾಗ ಸಂಘದ ಸೂಪರ್ ಮಾರ್ಕೆಟ್ ನಲ್ಲಿ ದೊರೆಯುವ ವಸ್ತುಗಳ ಗುಣಮಟ್ಟ ತೀರಾ ಕಳಪೆಯಾಗುತ್ತಿದ್ದು, ಗಮನ ವಹಿಸುವವರು ಯಾರೂ ಇಲ್ಲದೇ ಹೀಗಾಗಿದೆಯೋ ಅಥವಾ ಯಾರೋ ಕಮಿಷನ್ ಆಸೆಗೆ ರೈತರಿಗೆ ಕಳಪೆ ಗುಣಮಟ್ಟದ ವಸ್ತು ಪೂರೈಸುತ್ತಿದ್ದಾರೋ ಎಂದು ಸಂಶಯವಿರುವುದಾಗಿ ಸದಸ್ಯರು ಪ್ರಶ್ನಿಸುತ್ತಿದ್ದಾರೆ.

NPK ಪ್ರಮಾಣ ತೀರಾ ಕಡಿಮೆ: ರೈತರಿಗೆ ಮೋಸ

300x250 AD

ಟಿಎಸ್ಎಸ್ ತನ್ನ ಬ್ರಾಂಡ್‌ನಲ್ಲಿ ಗ್ರಾಹಕರಿಗೆ ನೀಡುತ್ತಿರುವ ಕೃಷಿ ಮಿತ್ರ ಗೊಬ್ಬರದಲ್ಲಿ ಎನ್‌ಪಿಕೆ ಪ್ರಮಾಣದಲ್ಲಿ ತೀರಾ ಕಡಿಮೆ ಅಂಶ ಕಂಡು ಬಂದಿದೆ. ಟಿಎಸ್‌ಎಸ್‌ನಲ್ಲಿ ಅಡಿಕೆಗೆ ಹಾಕಲು ಗೊಬ್ಬರವನ್ನು ಖರೀದಿಸಲಾಗಿತ್ತು. ಅದರಲ್ಲಿ NPK ಪ್ರಮಾಣವು 16:06:21 ಎಂದು ನಮೂದಾಗಿತ್ತು. ಆದರೆ ಗೊಬ್ಬರವನ್ನು ಮನೆಗೊಯ್ದು ನೋಡಿದಾಗ ಗುಣಮಟ್ಟದ ಕುರಿತು ಅನುಮಾನ ಬಂದು ಈ ಗೊಬ್ಬರವನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಚೀಲದಲ್ಲಿ ಇವರು ಹಾಕಿರುವ ಅಂಶಗಳು ತೀರಾ ಕಡಿಮೆಯಿದೆ. NPKದಲ್ಲಿ N – ನೈಟ್ರೋಜನ್ ಆರ್ಗ್ಯಾನಿಕ್ 14 ಇರಬೇಕಿತ್ತು. ಆದರೆ ಅದು ಕೇವಲ 4.41 ರಷ್ಟಿದೆ. P – ಪಾಸ್ಪರಸ್ 06 ರ ಬದಲಾಗಿ 0.073 ಮಾತ್ರ ಇದೆ. ಹಾಗು K – ಪೊಟ್ಯಾಷಿಯಮ್ 21 ರ ಬದಲಾಗಿ 14.35 ರಷ್ಟಿದ್ದು ಇದರಿಂದ ಗೊಬ್ಬರ ಗುಣಮಟ್ಟದ ಕೂಡಿರುವುದು ಸಂಶಯವಿದೆ. ಟಿಎಸ್ಎಸ್ ಸಂಸ್ಥೆಯು ರೈತರಿಗೆ ಮೋಸ ಮಾಡುತ್ತಿದೆ ಎಂದು ಗೊಬ್ಬರ ಖರೀದಿಸಿದ ರೈತರೊಬ್ಬರು ಆರೋಪಿಸಿದ್ದಾರೆ.

ದಾಸ್ತಾನಿರುವ ಗೊಬ್ಬರ ಮುಟ್ಟುಗೋಲು ಹಾಕಿ, ಕ್ರಮ ಕೈಗೊಳ್ಳಿ:

ಟಿಎಸ್ಎಸ್ ಸಂಘದಲ್ಲಿ ಮೇಲ್ಕಾಣಿಸಿದ ಗೊಬ್ಬರದ ಗುಣಮಟ್ಟದ ಬಗ್ಗೆ ಆಡಳಿತ ಮಂಡಳಿಗೆ ಸಂಪೂರ್ಣ ಅರಿವಿದ್ದರೂ ಸಹಿತ ಅಧಿಕ ಲಾಭದ ಉದ್ದೇಶದಿಂದ ರೈತರ ಬೆಳೆ, ಮರ, ಗಿಡಗಳಿಗೆ ಹಾಗೂ ಆಸ್ತಿಗೆ ಹಾನಿ ಉಂಟುಮಾಡುವ ದುರುದ್ದೇಶದಿಂದ ಮಾರಾಟ ಮಾಡಿರುತ್ತಾರೆ. ಗೊಬ್ಬರ ಖರೀದಿಸಿದವರಿಗೆ ಈ ಮೂಲಕ ಮೋಸ ಹಾಗೂ ವಂಚನೆ ಮಾಡಿರುತ್ತಾರೆ. ತಕ್ಷಣ ಗೋದಾಮಿನಲ್ಲಿ ದಾಸ್ತಾನಿರುವ ಗೊಬ್ಬರವನ್ನು ಸಂಬಂಧಿಸಿದ ಇಲಾಖೆ ಮುಟ್ಟುಗೋಲು ಹಾಕಿ, ಕಾನೂನು ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕು ಮತ್ತು ರೈತರೂ ಸಹ ಟಿಎಸ್ಎಸ್ ನಲ್ಲಿ ಗೊಬ್ಬರ ಮತ್ತಿತರ ವಸ್ತುಗಳನ್ನು ಖರೀದಿಸುವಾಗ ಜಾಗೃತೆ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top