ಹೊನ್ನಾವರ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಕಿ ಕುಂಬಾರಕೇರಿ ಇದರ 38ನೇ ವರ್ಷದ ಉತ್ಸವಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ಎಸ್. ವೈದ್ಯರವರಿಗೆ ಸಮಿತಿಯ ಪರವಾಗಿ ಪ್ರಸಾದವನ್ನು ನೀಡಿ ಸನ್ಮಾನಿಸಲಾಯಿತು.
ಸಚಿವರು ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಕಳೆದ ವರ್ಷ ಅಜಮಾಸ 1.80 (ಒಂದು ಲಕ್ಷ ಎಂಬತ್ತು ಸಾವಿರ )ರೂಪಾಯಿಯ ಮೇಲ್ಚಾವಣಿ ಸಾಮಗ್ರಿಗಳನ್ನು ಸಹಾಯರ್ಥವಾಗಿ ತಮ್ಮ ಸ್ವಂತ ಹಣದಿಂದ ನೀಡಿರುತ್ತಾರೆ. ಮುಂದಿನ ಅಭಿವೃದ್ದಿಗಾಗಿ ಸಹಾಯಧನದ ಭರವಸೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರಾಜು ಈಶ್ವರ್ ನಾಯ್ಕ, ಕಾರ್ಯದರ್ಶಿ ಶೇಖರ್ ನಾಯ್ಕ, ಸಮಿತಿಯ ಪ್ರಮುಖರಾದ ರಘುವೀರ ಪ್ರಭು, ನಾಗರಾಜ ನಾಯ್ಕ, ಜಂಗಾ ಹಳ್ಳೆರ, ಮಾದೇವ ಕೊಡಿಯಾ ಸಾ.ಗ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.