ಯಲ್ಲಾಪುರ : ‘ಮುಂದಿನ ಐವತ್ತು ವರ್ಷಗಳನ್ನು ಗಮನದಲ್ಲಿಟ್ಟು ಭೆಒಮ್ಮನಳ್ಳಿ ಡ್ಯಾಂನಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. 96 ಕೋಟಿ ಯೋಜನೆಯ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಆಗಿದ್ದು ತಕ್ಷಣ ಕೆಲಸ ಆರಂಭಿಸುವಂತೆ ಶಾಸಕ ಶಿವರಾಮ ಹೆಬ್ಬಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಳಿಯಾಳ ಎಇಇ ರಷೀದ ರಿತ್ತಿ ಅವರಿಗೆ ಸೂಚನೆ ನೀಡಿದರು.
ಸೋಮವಾರ ಸಂಜೆ ನಡೆದ ಪಟ್ಟಣ ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಸಭ ನಡೆಸಿ ಅವರು ಮಾತನಾಡಿದರು. ಕಾಮಗಾರಿ ಆರಂಭಕ್ಕೆ ಅಗತ್ಯವುಳ್ಳ ಸಿದ್ಧತೆ ನಡೆಸಿ, ಅರಣ್ಯ ಇಲಾಖೆಯಲ್ಲಿ ಪೈಪ್ ಲೈನ್ ಹಾಕಲು ಮರ ಕಡಿಯುವ ಅಗತ್ಯವಿಲ್ಲ. ಅರಣ್ಯ ಇಲಾಖೆ ತೊಂದರೆ ನೀಡದಂತೆ ವಲಯ ಅರಣ್ಯಾಧಿಕಾರಿ ನರೇಶ ಜಿ.ವಿ. ಅವರಿಗೆ ಸೂಚಿಸಿದರು. ಬರುವ ವರ್ಷದ ಕೊನೆಯೊಳಗೆ ನೀರು ಪೂರೈಕೆ ಆಗಬೇಕು. ನಾನು ಮತ್ತು ಪ.ಪಂ. ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಿ ಎಂದು ಅವರು ಸೂಚಿಸಿದರು.
ಎಇಇ ರಷೀದ ರಿತ್ತಿ ಮಾತನಾಡಿ, ಎರಡು ತಾಲೂಕಿನ ಲೋಕೋಪಯೋಗಿ ಇಲಾಖೆಯ ಅನುಮತಿ ಬೇಕು. ಈಗಾಗಲೇ ಇರುವ ನೀರು ಶುದ್ಧೀಕರಣ ಘಟಕವನ್ನು ಸ್ವಚ್ಚಗೊಳಿಸಿ, ದುರಸ್ತಿಗೊಳಿಸಲಾಗುವುದು. ಎರಡು ವರ್ಷಗಳ ಅವಧಿ ನೀಡಲಾಗಿದ್ದು ಅಷ್ಟರೊಳಗೆ ಕಾಮಗಾರಿ ಪೂರೈಸುವ ಭರವಸೆ ನೀಡಿದರು.
ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಮಾತನಾಡಿ ಡೆಂಗ್ಯೂ ಕುರಿತು ಪಟ್ಟಣದಲ್ಲಿ ಸೊಳ್ಳೆ ಹರಡದಂತೆ ಜಾಗೃತಿ ಮೂಡಿಸಲಾಗುತ್ತಿದೆಯಲ್ಲದೇ, ನೀರು ನಿಲ್ಲುವ ಸ್ಥಳಗಳ ಸರ್ವೆ ನಡೆಸಲಾಗುತ್ತಿದೆ. ನಮ್ಮ ಕ್ಲಿನಿಕ್ ಸಧ್ಯದಲ್ಲೇ ಆರಂಭಿಸಲಾಗುತ್ತಿದೆ. ನಾಲ್ಕು ಕಡೆಗಳಲ್ಲಿ ಆರೋಗ್ಯ ಮಂದಿರ ಆರಂಭಿಸಲಾಗುತ್ತಿದೆ.
ಆರೋಗ್ಯ ನಿರೀಕ್ಷಕ ಗುರು ಗಡಗಿ ಪಟ್ಟಣದ ವಾರ್ಡಗಳಲ್ಲಿ, ಬ್ಲೀಚಿಂಗ್, ಫಾಗಿಂಗ್ ನಡೆಸಲಾಗುತ್ತಿದೆ.
ಹೆಚ್ಚುತ್ತಿರುವ ಪಟ್ಟಣಕ್ಕನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ನಗರ ನೈರ್ಮಲ್ಯೀಕರಣದ ದೃಷ್ಠಿಯಿಂದ ಹೆಚ್ಚು ಪೌರ ಕಾರ್ಮಿಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಎಂದು ಸದಸ್ಯ ರಾಧಾಕೃಷ್ಣ ನಾಯಕ ಆಗ್ರಹಿಸಿದರು.
ಎಲ್ಲೆಲ್ಲಿ ಸ್ವಚ್ಚತೆ ಆಗಿಲ್ಲವೋ ಆಧ್ಯತೆಯ ಆಧಾರದ ಮೇರೆಗೆ ತಕ್ಷಣ ಸ್ವಚ್ಚತೆಮಾಡಿ ಎಮದು ಶಾಸಕರು ಸೂಚಿಸಿದರು.
ಕೃಷಿ ಇಲಾಖೆಯ ನಾಗರಾಜ ನಾಯ್ಕ, ತೋಟಗಾರಿಕೆ ಇಲಾಖೆಯ ಸುಭಾಸ ಹೆಗಡೆ ಆರಕ್ಷಕ ಇಲಾಖೆಯಿಂದ ನಗರದಲ್ಲಿ ಗಾಂಜಾಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲು ಸೂಚನೆ. ಬೇಕಾ ಬಿಟ್ಟಿ ಚಾಲನೆ ನಡೆಸುವ ಬೈಕ್ ಸವಾರರ ಮೇಲೆ ಕ್ರಮಕ್ಕೆ ಪಿ.ಎಸ್.ಐ. ಸಿದ್ದು ಗುಡಿ ಅವರಿಗೆ ಶಾಸಕರು ಸೂಚನೆ ನೀಡಿದರು.
ಲೋಕೋಪಯೋಗಿ ಇಲಾಖೆ ಎಇಇ ¸ರಾಷ್ಟ್ರೀಯ ಹೆದ್ದಾರಿ, ಸಿಡಿಪಿಓ, ಹಿಂದುಳಿದ ವರ್ಗ ಅಭೀವೃದ್ಧಿ ಇಲಾಖೆ, ಸಮಾಜ ಕಲ್ಯಾಣ,ಶಿಕ್ಷಣ ಇಲಾಖೆ. ಊಮಾನ ಇಲಾಖೆ ಹಾಗೂ ವಿವಿದ ಇಲಾಖೆಗಳ ವರದಿಯನ್ನು ಅಧಿಕಾರಿಗಳು ವಿವರಿಸಿದರು. ಮುಖ್ಯಾಧಿಕಾರಿ ಸುನೀಲ ಗಾವಡೆ, ತಹಶೀಲ್ದಾರ ಅಶೋಕ ಭಟ್ಟ, ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮೀತ ಅಂಗಡಿ ವೇದಿಕೆಯಲ್ಲಿದ್ದರು. ಪ.ಪಂ. ಅಧಿಕಾರಿ ಹೇಮಾವತಿ ಭಟ್ಟ ಸ್ವಾಗತಿಸಿದರು.