ಯಲ್ಲಾಪುರ: ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಹೇಳಿದರು.
ಅವರು ಶನಿವಾರ ತಾಲೂಕಿನ ಕಿರವತ್ತಿಯ ಕೆಪಿಎಸ್ ಮೈದಾನದಲ್ಲಿ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಗ್ರಾಪಂ ಸಹಕಾರದಲ್ಲಿ ನಡೆದ 14 ವರ್ಷದೊಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನ್ನಾಡಿದರು.
ಶಿಕ್ಷಣ ಸಂಯೋಜಕ ಪ್ರಶಾಂತ ಜಿ ಎನ್,ಕಿರವತ್ತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಜನಾರ್ಧನ ಗಾಂವ್ಕಾರ, ಸಿಆರ್‌ಪಿಗಳಾದ ನಾಗರಾಜ ನಾಯ್ಕ, ವಿಶ್ವನಾಥ ಮರಾಠೆ , ಶ್ರೀನಿವಾಸ ಪ್ರಸಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ನಾಯಕ, ನೌಕರರ ಸಂಘದ ಸದಸ್ಯ ನಾರಾಯಣ ಕಾಂಬಳೆ ಶಿಕ್ಷಕರಾದ ಸಂತೋಷ ನಾಯ್ಕ,ನಾಗರಾಜ ಡಿ. ನಾಯ್ಕ ಭಾಗವಹಿಸಿದ್ದರು.
ಹೆಣ್ಣು ಮಕ್ಕಳ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಎಚ್‌ಪಿಎಸ್ ಮಾದೇವಕೊಪ್ಪ, ಗಂಡು ಮಕ್ಕಳ ವಿಭಾಗದಲ್ಲಿ ಎಚ್‌ಪಿಎಸ್ ಹುಣಶೆಟ್ಟಿಕೊಪ್ಪದ ಬಾಲಕರು ಪಡೆದುಕೊಂಡರು.