Slide
Slide
Slide
previous arrow
next arrow

ರಾಮನಗುಳಿ-ಕಲ್ಲೇಶ್ವರ ಶಾಶ್ವತ ಸೇತುವೆ ನಿರ್ಮಿಸಿದ ರೂಪಾಲಿ‌ ನಾಯ್ಕರಿಗೆ “ನಾಗರಿಕ ಸನ್ಮಾನ “

300x250 AD

ಜನರ ಕನಸು‌ ನನಸು ಮಾಡಿ ಜನರ ಮನಗೆದ್ದ ರೂಪಾಲಿ ನಾಯ್ಕ | 25 ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ವೇಗ, ಗುಣಮಟ್ಟದೊಂದಿಗೆ ಸೇತುವೆ ನಿರ್ಮಾಣ |

ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ಕಳೆದ 2019 ರ ಗಂಗಾವಳಿ ನದಿ ಪ್ರವಾಹಕ್ಕೆ ತಾಲೂಕಿನ ರಾಮನಗುಳಿ-ಕಲ್ಲೇಶ್ವರ ಗ್ರಾಮಗಳನ್ನು ಸಂಪರ್ಕಿಸುವ ತೂಗುಸೇತುವೆ ಕುಸಿತ ಕಂಡಿತ್ತು. ಅಂದು ಆಗಿನ ಶಾಸಕಿಯಾಗಿದ್ದ ರೂಪಾಲಿ ನಾಯ್ಕ ಇಲ್ಲಿಯ ಜನರಿಗೆ ಶಾಶ್ವತ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಇದೀಗ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶಾಸಕಿ ರೂಪಾಲಿ ನಾಯ್ಕರಿಗೆ ಕೃಷ್ಣೋತ್ಸವ ಸಮಿತಿ ಕಲ್ಲೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಿದ್ದಾರೆ.

ತಾಲೂಕಿನ ಅತ್ಯಂತ ಕಟ್ಟಕಡೆಯ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಡೋಂಗ್ರಿ ಗ್ರಾ.ಪಂ ತೆರಳಲು ಇದ್ದ ಏಕಮಾತ್ರ ತೂಗುಸೇತುವೆ 2019 ರಲ್ಲಿ ಕುಸಿತ ಕಂಡಿದ್ದು ಇಲ್ಲಿಯ ಗ್ರಾಮಸ್ಥರಿಗೆ ತೀವ್ರ ಘಾಸಿ ಉಂಟುಮಾಡಿತ್ತು. ಸೇತುವೆ ಕುಸಿದ ಪರಿಣಾಮ ಸರ್ಕಾರಿ ಕಚೇರಿಗಳಿಗೆ, ಶಾಲೆಗೆ, ಆಸ್ಪತ್ರೆಗೆ, ಬ್ಯಾಂಕು ಹೀಗೆ ದಿನನಿತ್ಯದ ಹತ್ತು ಹಲವಾರು ಕೆಲಸ ಕಾರ್ಯಗಳಿಗೆ ಜನರು ಓಡಾಟ ನಡೆಸುವುದು ಕಷ್ಟಸಾಧ್ಯವಾಗಿತ್ತು. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಜನರೊಂದಿಗೆ ನಿಂತು ಜನರ ಕಷ್ಟಗಳನ್ನು ಅರಿತ ಅಂದಿನ ಕಾರವಾರ- ಅಂಕೋಲಾ‌ ವಿಧಾನಸಭಾ ಶಾಸಕಿ ರೂಪಾಲಿ ನಾಯ್ಕ ವಿಧಾನಸಭಾ ಕಲಾಪದಲ್ಲಿಯೂ ಕೂಡ ಸೇತುವೆ ಕುಸಿತದಿಂದ ಆದ ಸಮಸ್ಯೆಯ ಬಗ್ಗೆ ಹಾಗೂ ಇಲ್ಲೊಂದು ಶಾಶ್ವತ ಸೇತುವೆ ನಿರ್ಮಾಣ ಆಗಬೇಕಿದೆ ಎಂದು ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಬಳಿಕ ಶಾಸಕಿ ಛಲಬಿಡದ ತ್ರಿವಿಕ್ರಮನಂತೆ ನಿರಂತರ ಪ್ರಯತ್ನಿಸಿ ರೂಪಾಲಿ ಸರ್ಕಾರದ ಮಟ್ಟದಲ್ಲಿ 25 ಕೋಟಿ‌ ರೂ. ವೆಚ್ಚದ ಶಾಶ್ವತ ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ಪಡೆಯುವಲ್ಲಿ ಕೊನೆಗೂ ಯಶಸ್ವಿಯಾದರು.

ಮಂಗಳೂರು ಮೂಲದ ಮುಗ್ರೋಡಿ ಕನ್ಸ್ಟ್ರಕ್ಷನ್ ಎಂಬ ಗುತ್ತಿಗೆ ಸಂಸ್ಥೆ ಸೇತುವೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಗೊಂಡಿತ್ತು. ಕೇವಲ 2 ವರ್ಷಗಳ ಅವಧಿಯಲ್ಲಿ ಉತ್ತಮ ಗುಣಮಟ್ಟದ ಶಾಶ್ವತ ಸಿಮೆಂಟ್ ರಸ್ತೆ ನಿರ್ಮಿಸಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ ಮುಗ್ರೋಡಿ ಕನ್ಸ್ಟಕ್ಷನ್ ಗುತ್ತಿಗೆ ಸಂಸ್ಥೆ ಗೂ ಜನರು ಪ್ರಶಂಸಿಸುತ್ತಿದ್ದಾರೆ.

300x250 AD

ರಾಮನಗುಳಿ ಸೇತುವೆ ಕಾಮಗಾರಿ ನಡೆಯುವ ಸಂದರ್ಭದಲ್ಲಿಯೂ ಶಾಸಕಿ ರೂಪಾಲಿ ನಾಯ್ಕ 10 ಕ್ಕೂ ಹೆಚ್ಚು ಬಾರಿ ಸ್ಥಳಕ್ಕೆ ಭೇಟಿ ಕಾಮಗಾರಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೇ ತಮ್ಮ ಶಾಸಕತ್ವದ ಅವಧಿಯಲ್ಲಿ ಡೋಂಗ್ರಿ ಗ್ರಾ.ಪಂ ನ್ನು ದತ್ತು ತೆಗೆದುಕೊಂಡು ರಸ್ತೆ, ಕುಡಿಯುವ ನೀರು, ಶಾಲೆ, ಸೇತುವೆ, ಮೂಲಭೂತ ಸೌಕರ್ಯಗಳ ‌ಅಭಿವೃದ್ಧಿಗೆ ಸುಮಾರು 60 ಕೋಟಿಗೂ ಹೆಚ್ಚಿನ ಅನುದಾನವನ್ನು ತಂದಿದ್ದಾರೆ.

ರಾಮನಗುಳಿ ಹಾಗೂ ಕಲ್ಲೇಶ್ವರ ಗ್ರಾಮಗಳ ನಡುವೆ ಶಾಶ್ವತವಾಗಿ ಸಂಪರ್ಕ ಕೊಂಡಿಯನ್ನು ಕಲ್ಪಿಸಿದ ಮಾಜಿ ಶಾಸಕಿ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕರಿಗೆ ಶ್ರೀ ಕೃಷ್ಣೋತ್ಸವ ಸಮಿತಿ ಕಲ್ಲೇಶ್ವರ ಹಾಗೂ ಸುತ್ತಮುತ್ತಲಿನ ಊರಿನ ಗ್ರಾಮಸ್ಥರೆಲ್ಲರೂ ಸೇರಿ ಕೃಷ್ಣ ಜನ್ಮಾಷ್ಠಮಿಯ ಶುಭ ಸಂದರ್ಭದಂದು ಕಲ್ಲೇಶ್ವರದ ಗೋಪಾಲಕೃಷ್ಣ ದೇವಸ್ಥಾನದ ಆವರಣದ ಬೃಹತ್ ವೇದಿಕೆಯಲ್ಲಿ “ನಾಗರಿಕ ಸನ್ಮಾನ” ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

Share This
300x250 AD
300x250 AD
300x250 AD
Back to top