Slide
Slide
Slide
previous arrow
next arrow

ಪೊಲೀಸರೇ ಇದೇನಿದು ! ಹೆಲ್ಮೇಟ್ ಗೆ ಕಟ್ಟಿದ ದಂಡದ ಹಣ ಚಿನ್ನದಂಗಡಿಯವನ ಜೇಬಿಗೆ..!!

300x250 AD

ಭಟ್ಕಳ: ಹೆಲ್ಮೆಟ್ ರಹಿತ ದಂಡದ ಮೊತ್ತ ಪೊಲೀಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪಾರಿಯ ಖಾತೆಗೆ ವರ್ಗಾವಣೆಯಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಭಟ್ಕಳ ವರದಿಗಾರನೋರ್ವ ನಡೆಸಿದ ರಿಯಾಲಿಟಿ ಚೆಕ್ ಕಾರ್ಯಾಚರಣೆಯಲ್ಲಿ ಇಂಥದ್ದೊಂದು ಭ್ರಷ್ಟಾಚಾರ ಬಯಲಿಗೆ ಬಂದಿದೆ.

ಭಟ್ಕಳ ನಗರ ಠಾಣೆಯ ಪೊಲೀಸ್‌ ಅಧಿಕಾರಿಯೋರ್ವರು ಹೆಲ್ಮೆಟ್ ತಪಾಸಣೆಯ ದಂಡ ಪಾವತಿಯ ಹಣವನ್ನು ಇಲಾಖೆಯ ಖಾತೆಗೆ ಹಣ ಪಾವತಿಸಿಕೊಳ್ಳುವ ಬದಲು ತಮ್ಮ ಪರಿಚಯಸ್ಥರೋರ್ವರ ಖಾತೆಗೆ ವರ್ಗಾಯಿಸುತ್ತಿದ್ದಾರೆ ಎಂಬ ದೂರು ಭಟ್ಕಳ ವರದಿಗಾರನಿಗೆ ಸಾರ್ವಜನಿಕರಿಂದ ಬಂದಿತ್ತು. ಇದರ ಬೆನ್ನತ್ತಿದ ವರದಿಗಾರ ಕಾರ್ಯಾಚರಣೆಗೆ ಇಳಿದಿದ್ದು, ಭ್ರಷ್ಟಾಚಾರ ನಡೆಯುತ್ತಿರುವುದು ಖಾತ್ರಿಯಾಗಿದೆ.

ಭಟ್ಕಳದ ಪೊಲೀಸ ಇಲಾಖೆಯಿಂದ ಕಳೆದ ಒಂದು ತಿಂಗಳಿನಿಂದ ನಗರ ಭಾಗ ಸೇರಿದಂತೆ ಪ್ರಮುಖ ಸ್ಥಳದಲ್ಲಿ ದ್ವಿಚಕ್ರ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಆಗುತ್ತಿದ್ದರೆ, ಇನ್ನು ಕೆಲವು ಕಡೆ ವಾಹನ ಸವಾರರಿಂದ ದಂಡ ಪಾವತಿಸಿಕೊಂಡ ಹಣದ ದುರ್ಬಳಕೆ ಕೆಲಸ ಜೋರಾಗಿ ನಡೆಯುತ್ತಿದೆ. ಹೆಲೈಟ್ ಧರಿಸದವರಿಂದ ಆನ್ ಲೈನ್ ಮೂಲಕ ಬೇರೆಯವರ ನಂಬರಿಗೆ ದಂಡ ಪಾವತಿಸಿರುವ ಬಗ್ಗೆ ದೂರು ಕೇಳಿ ಬಂದಿತ್ತು.

ಕಾರ್ಯಾಚರಣೆಗೆ ಇಳಿದ ಭಟ್ಕಳ ವರದಿಗಾರ ಸಾರ್ವಜನಿಕರಿಂದ ವ್ಯಾಪಕ ದೂರಿನ ಹಿನ್ನೆಲೆ ಭಟ್ಕಳ ಡೈರಿ ರಿಯಾಲಿಟಿ ಚೆಕ್‌ಗೆ ಮುಂದಾಯಿತು. ಭಟ್ಕಳ ಡೈರಿ ಪ್ರತಿನಿಧಿ ಹೆಲೈಟ್ ಧರಿಸದೆ ತಪಾಸಣೆ ನಡೆಯುವ ಸ್ಥಳಕ್ಕೆ ತೆರಳಿದರು. ಇಲ್ಲಿನ ನಗರ ಠಾಣೆಯ ರಸ್ತೆಯ ಎದುರಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ದ್ವಿ ಚಕ್ರ ವಾಹನ ನಿಲ್ಲಿಸುವಂತೆ ಸೂಚಿಸಿದರು. ಪೊಲೀಸ್‌ ಸಿಬ್ಬಂದಿ ಸೂಚನೆಯಂತೆ ಭಟ್ಕಳ ಡೈರಿ ಪ್ರತಿನಿಧಿ ಠಾಣೆಯ ಆವರಣದಲ್ಲಿ ನಿಂತಿದ್ದ ಪಿಎಸೈ ಯಲ್ಲಪ್ಪ ಬಳಿ ತೆರಳಿದರು. ದಂಡ ೫೦೦ ರೂ. ಕಟ್ಟುವಂತೆ ಪಿಎಸ್‌ಐ ಸೂಚಿಸಿದಾಗ ನಗದು ಬದಲಿಗೆ ಆನ್ ಲೈನ್ ಮೂಲಕ ಹಣ ಪಾವತಿಸುವುದಾಗಿ ತಿಳಿಸಲಾಯಿತು.

ಮೊಬೈಲ್ ನಂಬರಿಗೆ ಹಣ ವರ್ಗಾವಣೆ :
ಭಟ್ಕಳ  ವರದಿಗಾರ ಪ್ರತಿನಿಧಿ ಆನೈನ್ ಮೂಲಕ ಪಾವತಿಗೆ ಮುಂದಾದಾಗ ಪಿಎಸ್‌ಐ ಯಲ್ಲಪ್ಪ ಅವರು ಮೊಬೈಲ್ ನಂಬರ್ ನೀಡಿದರು. ಅದಕ್ಕೆ ಹಣ ವರ್ಗಾಯಿಸುವಂತೆ ಸೂಚಿಸಿದರು. ಅವರು ಹೇಳಿದಂತೆ ಹಣ ವರ್ಗಾಯಿಸಿಯೂ ಆಯಿತು. ಅದೇ ರೀತಿ ಭಟ್ಕಳ  ವರದಿಗಾರ ಮುಂದೆಯೇ  ೪-೫ ಮಂದಿ ವಾಹನ ಸವಾರರಿಗೆ ಅದೇ ನಂಬರಗೆ ಹಣ ವರ್ಗಾಯಿಸಲು ಸೂಚಿಸಿದರು. ಅಲ್ಲಿದ್ದವರೆಲ್ಲ ಅದೇ ನಂಬರಿಗೆ ದಂಡದ ಹಣವನ್ನು ವರ್ಗಾಯಿಸಿದ್ದಾರೆ.

ಚಿನ್ನದ ವ್ಯಾಪಾರಿಯ ಖಾತೆ : ಹಣ ವರ್ಗಾಯಿಸುವಾಗ ಖಾತೆದಾರರ ಹೆಸರಿನಲ್ಲಿ ಭಟ್ಕಳದ ಚಿರಪರಿಚಿತ ಚಿನ್ನದ ವ್ಯಾಪಾರಿಯ ಹೆಸರಿಗೆ ಥಳಕು ಹಾಕುತ್ತಿದೆ. ಈ ಹಣ ಸರ್ಕಾರದ ಖಾತೆಗೆ ಹೋಗುತ್ತದೆಯೋ ಅಥವಾ ಯಾರ ಜೇಬಿಗೆ ಸೇರುತ್ತದೆಯೋ ಎಂಬ ಪ್ರಶ್ನೆ ಎದ್ದಿದೆ. ಖಾಸಗಿ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಆದ ಮೇಲೂ ಇಲಾಖೆಯ ಚಲನ್ ಕೊಡ್ತಾರಲ್ಲ? ಇದು ಹೇಗೆ ಸಾಧ್ಯ? ಹಾಗಾದರೆ, ಚಲನ್ ಕೂಡ ನಕಲಿಯೇ ಎಂಬ ಅನುಮಾನ ಕಾಡಿದೆ. ಈ ರೀತಿ ದಂಡದ ಹಣವು ದುರ್ಬಳಕೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ.

300x250 AD

ಈ ಬಗ್ಗೆ ಸ್ವತಃ ಯಲ್ಲಪ್ಪ ಅವರ ಗಮನಕ್ಕೆ ತಂದಾಗ, ಹಾರಿಕೆಯ ಉತ್ತರ ನೀಡಿ ಸಮಜಾಯಿಷಿ ನೀಡಲು ಮುಂದಾದರು. ಮಾಧ್ಯಮದವರೆಂದು ಮೊದಲೇ ಹೇಳಿದ್ದರೆ ನಿಮ್ಮನ್ನು ಬಿಡುತ್ತಿದ್ದೆವು ಎಂದು ಹೇಳಿದ್ದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಕಟ್ಟುನಿಟ್ಟಿನ ಹೆಲ್ಮೆಟ್ ತಪಾಸಣೆಯಲ್ಲಿ ಒನ್ಲೈನ್ ಮೂಲಕ (ಸ್ಕ್ಯಾನರ್) ಮುಖಾಂತರ ಇಲಾಖಾ ಖಾತೆಗೆ ದಂಡ ಪಾವತಿಸಿಕೊಳ್ಳುವ ಬದಲು ಪೊಲೀಸರು ಈ ರೀತಿ ಇನ್ಯಾರೋ ಸಾರ್ವಜನಿಕರ ಖಾತೆಗೆ ಹಣ ವರ್ಗಾಯಿಸಿ ಕೊಂಡಿರುವ ರೀತಿ ಯಾಕೆ? ಇವರ ಬಳಿ ಇಲಾಖೆಯ ಆನ್ ಲೈನ್ ಸ್ಕ್ಯಾನ‌ರ್ ಇಲ್ಲವೇ ಅಥವಾ ಜನರ ಹಣವನ್ನು ತಮ್ಮ ಬಳಕೆಗೆ ಬಳಸಿಕೊಳ್ಳಲು ಇವರ ಹುನ್ನಾರವೇ ಎಂಬ ಪ್ರಶ್ನೆಗಳು ಸಹಜವಾಗಿ ಎದ್ದಿವೆ.

ಚಿನ್ನದ ಅಂಗಡಿಯ ಮಾಲೀಕನಿಗೆ ಹಣ ವರ್ಗಾವಣೆ ಮಾಡಲು ಯಾಕೆ ಪಿ.ಎಸ್.ಐ ಯಲ್ಲಪ್ಪ ಯಾಕೆ ಹೇಳಿದರು? ಚಿನ್ನದ ಅಂಗಡಿ ಮಾಲೀಕನಿಗೂ ಪಿ.ಎಸ್.ಐ ಯಲ್ಲಪ್ಪಗೂ ಏನು ಸಂಬಂಧ? ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಗಮನ ಹರಿಸಿ ತನಿಖೆ ಮಾಡಲೇಬೇಕಾಗಿದೆ.

ರಸೀದಿಯಲ್ಲಿ ನಗದು ಪಾವತಿ!: ಪೋಲಿಸರು ಹೆಲ್ಮೆಟ್ ಧರಿಸದೇ ಇದ್ದ ಹಿನ್ನೆಲೆ ದಂಡ ಹಾಕಿದ ರಸೀದಿಯಲ್ಲಿ ನಗದು ಎಂದು ನಮೂದಿಸಿದ್ದಾರೆ. ಆದ್ರೆ ಭಟ್ಕಳ ವರಗಾರರಿಂದ ದಂಡದ ಹಣವನ್ನು ಸ್ವೀಕರಿಸಿದ್ದು ಆನ್ ಲೈನ್ ಮೂಲಕ. ಇದರಲ್ಲೇನೋ ಮೋಸದಾಟವಿದೆಯೇ? ತನಿಖೆಯಿಂದಲೇ ಗೊತ್ತಾಗಬೇಕಿದೆ.

Share This
300x250 AD
300x250 AD
300x250 AD
Back to top