ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ, ಆ.12 ರಂದು ಜಿಲ್ಲಾ ತುರ್ತು ನಿರ್ಹಹಣಾ ಕೇಂದ್ರದಲ್ಲಿ 24*7 ನಿಯೋಜಿಸಲಾದ ಸಿಬ್ಬಂದಿಗಳಿಗೆ ಪ್ರವಾಹ ಹಾಗೂ ಇನ್ನೀತರ ವಿಪತ್ತಿನ ಸಮಯದಲ್ಲಿ ನಿರ್ವಹಣೆಯ ಕುರಿತು ತರಬೇತಿಯನ್ನು ಆಯೋಜಿಸಲಾಯಿತು. ಹಾಗೆಯೇ ಎಸ್.ಡಿ.ಆರ್.ಎಪ್ ಮತ್ತು ಜಿಲ್ಲಾ ಪೊಲೀಸ್ ನಿಯಂತ್ರಣಾ ಕೊಠಡಿಯ ತಂಡವು ತುರ್ತು ವಿಪತ್ತಿನ ಸಂದರ್ಭದಲ್ಲಿ ಉಪಯೋಗಿಸುವಂತಹ ಸಲಕರಣೆಗಳ ಮಾಹಿತಿ ಹಾಗೂ ಅದನ್ನು ಬಳಕೆ ಮಾಡುವ ವಿಧಾನಗಳನ್ನು ಪ್ರಾತ್ಯಕ್ಷಿತೆಯೊಂದಿಗೆ ಮಾಹಿತಿಯನ್ನು ನೀಡಿದರು.
ತರಬೇತಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಜಿಲ್ಲಾ ಅಗ್ನಿಶಾಮಕ ಠಾಣೆ, ಎಸ್.ಡಿ.ಆರ್.ಎಪ್. ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ವಿಪತ್ತು ನಿಯಂತ್ರಣಾ ಕೊಠಡಿಯ ಸಿಬ್ಬಂದಿಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ/ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು