Slide
Slide
Slide
previous arrow
next arrow

ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!

300x250 AD
  • ಅಚ್ಯುತಕುಮಾರ ಯಲ್ಲಾಪುರ

ಶಿರೂರು ಗುಡ್ಡ ಕುಸಿತಕ್ಕೆ ಸಂಬ0ಧಿಸಿ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಈಶ್ವರ ಮಲ್ಪೆ (Ishwar malpe) ಶುಕ್ರವಾರ ಬೆಳಗ್ಗೆ ತಿಂಡಿಯನ್ನು ಸೇವಿಸಿಲ್ಲ. ಅವರ ತಂಡದ ಯಾವ ಸದಸ್ಯರು ಹಸಿವಾದರೂ ಅದನ್ನು ಬೇರೆಯವರಲ್ಲಿ ಹೇಳಿಕೊಂಡಿಲ್ಲ.

ಮಧ್ಯಾಹ್ನದ ವೇಳೆ ಮನೆ ಬಾಗಿಲಿಗೆ ಬಂದವರನ್ನು ಉತ್ತರ ಕನ್ನಡ ಜಿಲ್ಲೆಯ ಜನ ಊಟ ಹಾಕಿಸದೇ ಕಳುಹಿಸುವುದಿಲ್ಲ. ಆದರೆ, ಶಿರೂರು ಗುಡ್ಡ ಕುಸಿತಕ್ಕೆ ಸಂಬ0ಧಿಸಿ ಸ್ವಯಂ ಪ್ರೇರಣೆಯಿಂದ ಉಚಿತವಾಗಿ ಸೇವೆ ಮಾಡಲು ಆಗಮಿಸಿರುವ ಈಶ್ವರ ಮಲ್ಪೆ ಅವರಿಗೆ ಸರ್ಕಾರದ ನೆರವು ಸಿಗುತ್ತಿಲ್ಲ. ಶಿರೂರಿಗೆ ಬಂದ ಮೊದಲ ದಿನ ಅವರ ತಂಡದವರು ಬೇಲೆಕರೆಯ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು. ನಂತರ ಶಾಸಕ ಸತೀಶ್ ಸೈಲ್ ಅವರಿಗೆ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆದರೆ, ಈವರೆಗೂ ಅವರ ಊಟ-ಉಪಚಾರಕ್ಕಾಗಿ ಯಾರೂ ವಿಚಾರಿಸಿದವರಿಲ್ಲ. ಕಿಸೆಯಲ್ಲಿ ಕಾಸಿದ್ದರೆ ಮಾತ್ರ ಅವರು ಹಾಗೂ ಅವರ ಜೊತೆಯಿದ್ದವರು ಊಟ ಮಾಡುತ್ತಾರೆ. ಸೇವೆಯನ್ನೇ ಸರ್ವಸ್ವ ಎಂದುಕೊ0ಡಿರುವ ಅವರು ತಮ್ಮ ಕಷ್ಟಗಳನ್ನು ಯಾರಿಗೂ ಹೇಳಿಕೊಳ್ಳುವುದಿಲ್ಲ. ಸಾರ್ವಜನಿಕರಿಗೂ ಅವರ ಬಗ್ಗೆ ಅರಿವಿಲ್ಲ!

ಮೋಗವೀರ ಸಮುದಾಯದಲ್ಲಿ ಹುಟ್ಟಿದ ಮೀನುಗಾರ ಈ ಈಶ್ವರ ಮಲ್ಪೆ. ಬಾಲ್ಯದಿಂದಲೂ ಸಾಹಸ ಚಟುವಟಿಕೆ ರೂಡಿಸಿಕೊಂಡವರು. ಭಾರತೀಯ ಸೈನ್ಯ ಸೇರಬೇಕು ಎಂಬ ಮಹದಾಸೆ ಹೊಂದಿದ್ದ ಅವರು ಕಲಿತಿದ್ದು 9ನೇ ತರಗತಿ. ಹೀಗಾಗಿ ಸೇನೆಗೆ ಸೇರಲು ಆಗಲಿಲ್ಲ. ಆದರೆ, ತಮ್ಮಲ್ಲಿದ್ದ ಸಮಾಜ ಸೇವಾ ಗುಣ ಅವರು ಎಂದು ಬಿಟ್ಟುಕೊಟ್ಟಿಲ್ಲ. ದೋಣಿಗಳಿಗೆ ನೀರು ತುಂಬಿಸಿಕೊಡುವುದು ಅವರ ವೃತ್ತಿ. ಅವರ ಕೆಲಸಕ್ಕಾಗಿ ಯಾರ ಬಳಿಯೂ ಇಂತಿಷ್ಟೇ ಹಣ ಎಂದು ಅಂಗಲಾಚಿದವರಲ್ಲ. ಹೀಗಾಗಿಯೇ ಈಶ್ವರ ಮಲ್ಪೆ ಅವರು ಈಗಲೂ ತಗಡಿನ ಮನೆಯಲ್ಲಿ ವಾಸಿಸುತ್ತಾರೆ. ಅವರ ಮೂವರು ಮಕ್ಕಳಲ್ಲಿ ಒಬ್ಬರು ಈಗಿಲ್ಲ. ಇಬ್ಬರು ಅಂಗವಿಕಲರು!

ಅವರ ಜೊತೆ ಇದೀಗ ಬಂದಿರುವ ಎಲ್ಲರಿಗೂ ಬೇರೆ ಬೇರೆ ಕೆಲಸಗಳಿದೆ. ಆದರೂ ಸೇವಾ ಮನೋಭಾವನೆಯಿಂದ ಅವರು ರಕ್ಷಣಾ ಕೆಲಸಕ್ಕೆ ಬಂದಿದ್ದಾರೆ. ಈ ವೇಳೆ ಅವರೆಲ್ಲರ ಊಟ-ವಸತಿ ವೆಚ್ಚವನ್ನು ಈಶ್ವರ ಮಲ್ಪೆ ಭರಿಸುತ್ತಿದ್ದು, ಶಿರೂರಿಗೆ ಆಗಮಿಸಿದ ನಂತರ 40 ಸಾವಿರ ರೂ ಸ್ವಂತ ಹಣ ಖರ್ಚಾಗಿದೆ. ಇದೀಗ ಜೇಬಿನಲ್ಲಿ ಹಣವಿಲ್ಲ. ಆದರೂ, ಅವರು ತಮ್ಮ ರಕ್ಷಣಾ ಕೆಲಸ ನಿಲ್ಲಿಸಿಲ್ಲ. ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿಗೆ ಪ್ರವಾಸಿ ಮಂದಿರದಲ್ಲಿ ಊಟಕ್ಕೆ ಹೇಳಿದ್ದಾರೆ. ನಾಳೆಯದ್ದು ಹೇಗೆ ಎಂದು ಅರಿವಿಲ್ಲ. ದೋಣಿಗಳಿಗೆ ನೀರು ತುಂಬುವ ಕೆಲಸಕ್ಕೆ ಬರುವ ಕಾರ್ಮಿಕರು ಹಾಗೂ ಅವರ ಸ್ನೇಹಿತರ ಜೊತೆ ಸೇರಿ ಯಾರು ಎಲ್ಲಿಯೇ ಅಪಾಯದಲ್ಲಿದ್ದರೂ ಅಲ್ಲಿಗೆ ಧಾವಿಸುತ್ತಾರೆ. ಈವರೆಗೆ 20ಕ್ಕೂ ಅಧಿಕ ಜನರನ್ನು ಅವರು ಬದುಕಿಸಿದ್ದಾರೆ. ನೀರಿನ ಆಳಕ್ಕೆ ಸಿಲುಕಿದ್ದ ಸಾವಿರಾರು ಶವಗಳನ್ನು ನೀರಿನಿಂದ ಮೇಲೆತ್ತಿದ್ದಾರೆ.

300x250 AD

`ಎಲ್ಲರೂ ದುಡ್ಡು ಪಡೆದು ಕೆಲಸ ಮಾಡಿದರೆ, ಬಡವರ ರಕ್ಷಣೆಗೆ ಬರುವವರು ಯಾರೂ ಇರುವುದಿಲ್ಲ. ನೀರಿನ ಆಳದಲ್ಲಿ ಈಜುವುದು ಮಾತ್ರ ನನಗೆ ಗೊತ್ತು. ನಾನು ಇಲ್ಲಿ ಒಳಿತು ಮಾಡಿದರೆ ಅಂಗವಿಕಲರಾಗಿರುವ ನನ್ನ ಮಕ್ಕಳಿಗೆ ಮುಂದೆ ಒಳಿತಾಗುತ್ತದೆ ಎಂಬ ಭಾವನೆಯಿಂದ ಈ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತ ಅವರು ಭಾವುಕರಾದರು. ಇಡೀ ದಿನ ನೀರಿನಲ್ಲಿರುವ ಅವರು ಫೋನಿನಲ್ಲಿ ಮಾತಿಗೆ ಸಿಗುವುದು ಕಡಿಮೆ. ಅದಾಗಿಯೂ ಒಮ್ಮೊಮ್ಮೆ ಮಾತನಾಡುತ್ತಾರೆ. ಅವರು ಯಾರಿಂದಲೂ ಏನನ್ನು ಬೇಡುವುದಿಲ್ಲ. ಕೊಟ್ಟಿದ್ದನ್ನು ಸ್ವೀಕರಿಸಲು ಸಹ ಅವರಿಗೆ ಮುಜುಗರ. ಈಶ್ವರ ಮಲ್ಪೆ ಅವರ ಫೋನ್ ನಂ:Tel:+919663434415. ಇದೇ ಸಂಖ್ಯೆಯಲ್ಲಿ ಗೂಗಲ್ ಪೇ ( Google pay ) ಸಹ ಇದೆ.

`ಸ್ವ ಇಚ್ಚೆಯಿಂದ ನೀವು ನೀಡುವ ಪ್ರತಿಯೊಂದು ರೂಪಾಯಿ ಸಹ ಅಮೂಲ್ಯ’

Share This
300x250 AD
300x250 AD
300x250 AD
Back to top