ಹೊನ್ನಾವರ: ತಾಲೂಕಿನ ಚಂದಾವರದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ನ 61 ನೇ ಶಾಖೆಯನ್ನು ಕೆ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ಮೋಹನ್ದಾಸ್ ನಾಯಕ್ ಉದ್ಘಾಟಿಸಿದರು.
ನಂತರ ಮಾತನಾಡಿ ರೈತರ ಹಿತ ಕಾಪಾಡುವುದಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆ. ಜಿಲ್ಲೆ ಎಲ್ಲಾ ಗ್ರಾಮೀಣ ಭಾಗದಲ್ಲಿ ನಮ್ಮ ಶಾಖೆಯನ್ನು ತೆರೆಯುವ ಉದ್ದೇಶ ಹೊಂದಿದ್ದೇವೆ , ಇದು ನಿಮ್ಮ ಬ್ಯಾಂಕ್ ಎಂದು ತಿಳಿದು ಬ್ಯಾಂಕಿನ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕೆ.ಡಿ.ಸಿ.ಸಿ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ನಮ್ಮ ಬ್ಯಾಂಕಿಗೆ 21 ನೂತನ ಶಾಖೆಯನ್ನು ತೆರೆಯಲು ಆರ್.ಬಿ.ಐ ನಿಂದ ಅನುಮತಿ ದೊರೆತಿದ್ದು 104 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಬ್ಯಾಂಕಿನ ಪಾರದರ್ಶಕ ವ್ಯವಹಾರವೇ ಕಾರಣವಾಗಿದೆ. ರೈತರ ಶ್ರೇಯಸ್ಸಿಗೆ ಬ್ಯಾಂಕ್ ಸದಾ ಕಾಲ ಬದ್ದವಾಗಿದೆ. ಜಿಲ್ಲೆಯ ಬಹುಪಾಲು ರೈತರು , ಕೃಷಿ ಕಾರ್ಮಿಕರು ನಮ್ಮ ಬ್ಯಾಂಕಿನಲ್ಲಿ ವಹಿವಾಟು ನಡೆಸುತ್ತಿರುದರಿಂದ ಹಂತ ಹಂತವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ ಭಟ್, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ಕೆ.ಡಿ.ಸಿ.ಸಿ ಸಾಲ್ಕೋಡ್ ಶಾಖಾ ವ್ಯವಸ್ಥಾಪಕರಾದ ನಾಗರಾಜ ಹೆಗಡೆ ಖಾಸ್ಕಂಡ ಹಾಗೂ ಬ್ಯಾಂಕ ಸಿಬ್ಬಂದಿಗಳು ಮತ್ತಿತರರು ಇದ್ದರು.