ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಸೂಕ್ತ ಉದ್ಯೋಗಗಳನ್ನು ಪಡೆಯುವುದಕ್ಕೆ ಇಂದಿನ ಕಾಲಮಾನಕ್ಕೆ ಅಗತ್ಯವಿರುವ ಕೌಶಲ್ಯಾಭಿವೃಧ್ಧಿ ತರಬೇತಿಯನ್ನು ಉಚಿತವಾಗಿ ನೀಡಲು ಇಲ್ಲಿನ ಗ್ರೀನ್‌ಕೇರ್ ಸಂಸ್ಥೆಯು 2024-25ನೇ ಸಾಲಿನಲ್ಲಿ ಪ್ರಾಜೆಕ್ಟ್ ಕೌಶಲ್ಯ ವಿಕಾಸ ಯೋಜನೆಯಡಿ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಸದರಿ ಯೋಜನೆಯಡಿಯಲ್ಲಿ ಶಿರಸಿಯಲ್ಲಿ ವಾಣಿಜ್ಯ ಪದವಿಧರರಿಗೆ ಅಕೌಂಟ್ ಅಸಿಸ್ಟೆಂಟ್ ವಲಯದಲ್ಲಿ 30 ದಿನಗಳ ತರಬೇತಿ ಹಾಗೂ ಕನಿಷ್ಠ 10ನೇ ತರಗತಿ ಉತ್ತೀರ್ಣರಾದವರಿಗೆ ಆರೋಗ್ಯ ಸಹಾಯಕ ವಲಯದಲ್ಲಿ 45 ದಿನಗಳ ಕಾಲ ಪರಿಣಿತ ಸಂಪನ್ಮೂಲ ತರಬೇತುದಾರಿಂದ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯಲ್ಲಿ ಔದ್ಯೋಗಿಕ ಕೌಶಲ್ಯದ ಜೊತೆಯಲ್ಲಿ ಜೀವನ ಕೌಶಲ್ಯಾಭಿವೃದ್ದಿಗೂ ಆದ್ಯತೆ ನೀಡಿ ಅಭ್ಯರ್ಥಿಗಳು ಸಮರ್ಥ ಉದ್ಯೋಗ ಹೊಂದುವಂತೆ ಪ್ರೇರಣೆ ನೀಡಲಾಗುವುದು. ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಅರ್ಹ ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್. ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ನೊಂದಣಿಗಾಗಿ ಗ್ರೀನ್‌ಕೇರ್ ಸಂಸ್ಥೆ, ನಂ. 346, ಸಾಗರ ರೈಸ್‌ಮಿಲ್ ಹತ್ತಿರ, ವೀರಭದ್ರಗಲ್ಲಿ, ಶಿರಸಿ ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆTel:+9108384451261,Tel:+918904558570,Tel:+918904531265 ಗೆ ಸಂಪರ್ಕಿಸಬಹುದಾಗಿದೆ.