ಶಿರಸಿ: ಸದಾ ಸಾಮಾಜಿಕ ಸೇವೆಯ ಮೂಲಕ ಜನತೆಯ ವಿಶ್ವಾಸ ಗಳಿಸಿರುವ ಲಯನ್ಸ್ ಕ್ಲಬ್ ಶಿರಸಿ ಘಟಕವು ಕಳೆದ ಸಾಲಿನಲ್ಲಿ ಜನೋಪಯೋಗಿ ಕಾರ್ಯದ ಮೂಲಕ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಒಂದು ವರ್ಷದ ಸೇವಾ ಕಾರ್ಯಕ್ಕೆ ಸಹಕರಿಸಿರುವ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಲಯನ್ಸ್ ಕ್ಲಬ್ ನಿರ್ಗಮಿತ ಅಧ್ಯಕ್ಷ ಲ. ಅಶೋಕ್ ಹೆಗಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸವ್ಯಸಾಚಿ ಲಯನ್ ಡಾ. ಅಶೋಕ ಹೆಗಡೆ ಇವರ ಅಧ್ಯಕ್ಷತೆಯಲ್ಲಿ ಲಯನ್ಸ ವರ್ಷ ವಿಶಿಷ್ಠ ಸಾಧನೆಗಳೊಂದಿಗೆ ಗುರುತಿಸಲ್ಪಟ್ಟಿದೆ. ಲಯನ್ಸ್ ಕ್ಲಬ್ 2023-24 ವರ್ಷ ನಿಜಕ್ಕೂ ಅವಿಸ್ಮರಣೀಯ ವರ್ಷವಾಗಿ ಉಳಿಯಲಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ಸಂಸ್ಥೆಯ ಸಾಧನೆಗಳ ಪಕ್ಷಿ ನೋಟ ಇಲ್ಲಿದೆ.
1) ಶಿರಸಿ ಲಯನ್ಸ ಶಾಲೆಗೆ ಲಯನ್ಸ ಅಂತರರಾಷ್ಟ್ರೀಯ ಸಂಸ್ಥೆಯಿಂದ “ಡಿಸ್ಟ್ರಿಕ್ಟ್ ಹಂಗರ್ ರಿಲೀಫ ಪ್ರೊಗ್ರಾಮ್” ಅಡಿಯಲ್ಲಿ ರೂ. 82.50 ಲಕ್ಷ ಮಂಜೂರಿಯಾಗಿದೆ.
2) ಶಿರಸಿ ಹಾಗೂ ಸುತ್ತಮುತ್ತಲಿನ ಜನತೆಗೆ, ವಿವಿಧ ಶಾಲಾ ಮಕ್ಕಳಿಗೆ 150 ಕ್ಕೂ ಮೀರಿ ಅಂದಾಜು ವೆಚ್ಚ ರೂ. 5 ಲಕ್ಷಗಳ ವಿವಿಧ ಸೇವಾಕಾರ್ಯಗಳನ್ನು ನಡೆಸಲಾಗಿದೆ.
3) ಅಂದಾಜು 4 ಲಕ್ಷ ವೆಚ್ಚದೊಂದಿಗೆ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯೊಂದಿಗೆ ಕೈಜೋಡಿಸಿ ಲಯನ್ಸ ನಗರದ ಕಮಾನು ಸ್ಥಾಪಿಸಲಾಗಿದೆ.
4) ಶಿರಸಿ ಲಯನ್ಸ್ ಶಾಲಾ ಆವರಣದಲ್ಲಿ 2 ನೇ ಮಳೆ ನೀರು ಕೊಯ್ಲು ಘಟಕ ಸ್ಥಾಪನೆ ಮಾಡಲಾಗಿದೆ.
5) ಶಿರಸಿ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ 1,500 ಕ್ಕೂ ಮೀರಿ ಮಕ್ಕಳಿಗೆ ಉಪಹಾರ, ಊಟ ವಿತರಿಸಲಾಗಿದೆ.
6) ಶ್ರೀ ಮಾರಿಕಾಂಬಾ ಜಾತ್ರಾ ಸಮಯದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿದ್ದು, ಲಯನ್ ಪ್ರದೀಪ ಎಲ್ಲನಕರ್ ಇವರ ಸಹಯೋಗದಲ್ಲಿ ಉಚಿತ ಆಟೋ ಸೇವೆ ಮತ್ತು ಬೃಹತ್ ರಕ್ತದಾನ ಶಿಬಿರ ನಡೆಸಲಾಗಿದೆ.
7) ತಟ್ಟಿಸರ ಸೊಸೈಟಿ ನಡೆಸುವ ವೈದ್ಯಕೀಯ ಶಿಬಿರದಲ್ಲಿ ಲಯನ್ಸ ಕ್ಲಬ್ ಶಿರಸಿ ಸಹಯೋಗನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದೆ.
8) ಲಯನ್ಸ ಕ್ಲಬ್ ಶಿರಸಿ ಸದಸ್ಯತ್ವ ಅಭಿಯಾನದಲ್ಲಿ, 16 ನೂತನ ಸದಸ್ಯರ ಸೇರ್ಪಡೆಗೊಂಡಿದ್ದು, ಕ್ಲಬ್ ಸದಸ್ಯರಿಗೆ ಸ್ವರ್ಣ ಮಹೋತ್ಸವ ಅಂಗವಾಗಿ ವಿಶಿಷ್ಠ ಲೇಪಲ್ ಪಿನ್ ವಿತರಿಸಲಾಗಿದೆ.
9) ಎರಡು ನೂತನ ಲಯನ್ಸ ಕ್ಲಬ್ ಸ್ಥಾಪನೆ ಮಾಡಲಾಗಿದ್ದು, ಲಿಯೋ ಲಯನ್ಸ ಕ್ಲಬ್ ಶಿರಸಿ ಸಹ್ಯಾದ್ರಿ ಹಾಗೂ ಲಯನ್ಸ ಕ್ಲಬ್ ಬನವಾಸಿ ಉದ್ಘಾಟನೆಗೊಂಡಿದೆ.
10) ನೇತ್ರದಾನ ಶಿಬಿರ, ಸ್ವಚ್ಛ ಭಾರತ ಅಭಿಯಾನ, ಕ್ಯಾನ್ಸರ್ ರೋಗ ತಡೆಗಟ್ಟುವ ಸಲಹಾ ಕಾರ್ಯಕ್ರಮ, ಅಸಹಾಯಕರಿಗೆ ಲಯನ್ಸ ಸ್ಪಂದನ ಕಾರ್ಯಕ್ರಮ ನಡೆಸಲಾಗಿದೆ.
ಇನ್ನೂ ಅನೇಕ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಲಯನ್ಸ ಕ್ಲಬ್ ಶಿರಸಿ ಅತ್ತ್ಯುನ್ನತ ಸಾಮಾಜಿಕ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಲಯನ್ ಡಾ. ಅಶೋಕ ಹೆಗಡೆ ಮುಂಬರುವ ಎಲ್ಲ ಪಧಾದಿಕಾರಿಗಳಿಗೆ ಶುಭಾಶಯ ಕೋರುವುದರ ಜೊತೆಗೆ ಸ್ಥಳೀಯ ಶಾಸಕ, ಸಂಸದರಿಗೆ, ಎಲ್ಲ ಪತ್ರಿಕಾ ಬಂಧುಗಳಿಗೆ, ಶಿರಸಿ ಜನತೆಗೆ, ಶಿರಸಿ ಲಯನ್ ಶಿಕ್ಷಣ ಸಂಸ್ಥೆಯ ಪಧಾಧಿಕಾರಿಗಳಿಗೆ, ವಿವಿಧ ಸರಕಾರಿ ಸಂಸ್ಥೆಗಳಿಗೆ ತಮ್ಮ ಸಹಕಾರಗಳಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದ್ದಾರೆ. ಇವರಿಗೆ ಸಹಕಾರಿಯಾಗಿ ಸೇವೆ ಸಲ್ಲಿಸಿರುವ ಕ್ಲಬ್ ನ ಕಾರ್ಯದರ್ಶಿ ಲ. ಜ್ಯೋತಿ ಅಶ್ವತ್ಥ ಹೆಗಡೆ ಹಾಗು ಖಜಾಂಚಿ ಲ. ಶರಾವತಿ ಭಟ್ಟ ಇವರುಗಳಿಗೂ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅಶ್ವತ್ಥ ಹೆಗಡೆ ಶೀಗೇಹಳ್ಳಿ
ಶಿರಸಿ: ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲಿ ತನ್ನ ಸೇವೆಯ ಮೂಲಕ ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಶಿರಸಿ ಇದರ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಲಯನ್ ಅಶ್ವತ್ಥ ಹೆಗಡೆ, ಶೀಗೇಹಳ್ಳಿ ಜೂ. 30, ಭಾನುವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ನಗರದ ಲಯನ್ಸ್ ಭವನದಲ್ಲಿ ಸಂಜೆ 6 ರಿಂದ ನಡೆಯಲಿರುವ ಇನ್ಸ್ಟಾಲೇಷನ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲ. ರಾಜಶೇಖರ್ ಹಿರೇಮಠ್ ಉಪಸ್ಥಿತರಿರಲಿದ್ದಾರೆ. ಕ್ಲಬ್ ನ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಲ.ಅಶ್ವತ್ಥ ಹೆಗಡೆ, ಕಾರ್ಯದರ್ಶಿಯಾಗಿ ಲ.ವಿನಾಯಕ ಭಾಗ್ವತ್ ಹಾಗು ಕಜಾಂಚಿಯಾಗಿ ಲ.ವೇಣುಗೋಪಾಲ ಹೆಗಡೆ ಅಧಿಕಾರವಹಿಸಿಕೊಳ್ಳಲಿದ್ದಾರೆ. ಅದೇ ರೀತಿ ಲಿಯೋ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶ್ರೀನಿಕೇತನ ಇದರ ಇನ್ಸ್ಟಾಲೇಷನ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.