ಯಲ್ಲಾಪುರ:ತಾಲೂಕಿನ ವಜ್ರಳ್ಳಿ ಗ್ರಾಪಂ ಅಧ್ಯಕ್ಷ ಹೊನಗದ್ದೆಯ ಭಗೀರಥ ನಾಯ್ಕ ಅವರ ಮನೆಯಲ್ಲಿ ಅಡಗಿ ಕುಳಿತು ಆತಂಕ ಸೃಷ್ಟಿಸಿದ್ದ ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಕಾಡಿಗೆ ಬಿಟ್ಟು ಆತಂಕ ದೂರ ಮಾಡಿದ್ದಾರೆ.
ಮನೆಯೊಳಗಿದ್ದ ಕಾಳಿಂಗನನ್ನು ಕಂಡು ಮನೆಯವರೆಲ್ಲ ಹೌಹಾರಿದ್ದರು. ಅರಣ್ಯ ಇಲಾಖೆಯ ವಜ್ರಳಿಯ ಫಾರೆಸ್ಟರ್ ಉರಗಪ್ರೇಮಿ ಪ್ರಶಾಂತ ಸರಾಗವಾಗಿ ಕಾಳಿಂಗ ಸರ್ಪಹಿಡಿದು ಕಾಡಿನಲ್ಲಿ ಬಿಟ್ಟು ಬಂದರು.