Slide
Slide
Slide
previous arrow
next arrow

ಶ್ರೀನಿಕೇತನ ಶಾಲೆಗೆ ಟೇಬಲ್‌ಟೆನ್ನಿಸ್ ದೇಣಿಗೆ

300x250 AD

ಶಿರಸಿ: ತಾಲೂಕಿನ ಇಸಳೂರಿನ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಗೆ 10ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಲಿಯೋ ಕ್ಲಬ್ ಅಧ್ಯಕ್ಷೆ ಕು. ಸಿರಿ ಹೆಗಡೆ ಟೇಬಲ್‌ಟೆನ್ನಿಸ್ ಬೋರ್ಡನ್ನು ಶಾಲೆಗೆ ದೇಣಿಗೆಯಾಗಿ ನೀಡಿದ್ದಾಳೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ತಮ್ಮ ಅಮೃತ ಹಸ್ತಗಳಿಂದ  ಟೇಬಲ್‌ಟೆನ್ನಿಸ್ ಬೋರ್ಡನ್ನು ಲೋಕಾರ್ಪಣೆ ಮಾಡಿ ವಿದ್ಯಾರ್ಥಿನಿಯನ್ನು ಆಶೀರ್ವದಿಸಿದರು.

ಅಂತೆಯೇ ಮರುದಿನ, ಸಭಾಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಲಯನ್ಸ್ ಕ್ಲಬ್‌ನ ಸದಸ್ಯರಾದ ಎಮ್.ಜೆ.ಎಫ್. ಲಯನ್ ರಾಜಶೇಖರಯ್ಯ, ಲಯನ್ ಶ್ರೀಮತಿ ಪ್ರೇಮಾ ರಾಜಶೇಖರಯ್ಯ, ಲಯನ್ ಎಮಿರ್ ಬ್ರಿಟೋ ಹಾಗೂ ಲಯನ್ ಶ್ರೀಕೃಷ್ಣ ಥಾರ್ ಟೆನ್ನಿಸ್ ಬೋರ್ಡನ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್.ಜೆ.ಎಫ್. ಲಯನ್ ಅಶೋಕ ಹೆಗಡೆ ವಹಿಸಿದ್ದರು. ಸಲಹೆಗಾರರಾದ ಎಮ್.ಜೆ.ಎಫ್. ಲಯನ್ ವಿನಾಯಕ ಭಾಗವತ್, ಶಾಲೆಯ ಪ್ರಾಂಶುಪಾಲರಾದ ವಸಂತ್ ಭಟ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಲಿಯೋ ಕ್ಲಬ್ ಶಿರಸಿಯ ಸಂಯೋಜಕರು ಮತ್ತು ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಅತಿಥಿಗಳು ಲಿಯೋ ಕ್ಲಬ್‌ನ ಮಹತ್ವ ಹಾಗೂ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಂಶುಪಾಲರು ಮಾತನಾಡಿ ಶಾಲೆಯಲ್ಲಿ ನಡೆಯುತ್ತಿರುವ ಲಿಯೋ ಕ್ಲಬ್‌ನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಶಾಲಾ ಸಂಯೋಜಕರಾದ ಸಹಶಿಕ್ಷಕಿ ಕುಮಾರಿ ಆಶಾ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top