ಶಿರಸಿ: ಇಲ್ಲಿನ ಇಸಳೂರಿನ ಶ್ರೀನಿಕೇತನ ಶಾಲೆಯ ಇಕೋ ಕ್ಲಬ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಬೆಣ್ಣೆ ಹಣ್ಣು ಹಾಗೂ ಮಾವಿನ ಸಸಿಗಳನ್ನು ನೆಟ್ಟು ಸಂತಸಪಟ್ಟರು. ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು ಪರಿಸರದ ಪ್ರತಿ ತಮ್ಮ ಅನಿಸಿಕೆಗಳನ್ನು ಎಲ್ಲರೊಂದಿಗೆ ಭಾಷಣದ ಮೂಲಕ ಹಂಚಿಕೊಂಡರು. ಉಪಪ್ರಾಂಶುಪಾಲೆ ಶ್ರೀಮತಿ ವಸುಧಾ ಹೆಗಡೆ ಮಾತನಾಡಿ ಮರಗಿಡಗಳ ಮಹತ್ವ ಹಾಗೂ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.