Slide
Slide
Slide
previous arrow
next arrow

ಕರಿಕಲ್ ಧ್ಯಾನಮಂದಿರದಲ್ಲಿ ಬ್ರಹ್ಮಾನಂದ ಸ್ವಾಮೀಜಿ ಚಾತುರ್ಮಾಸ್ಯ ಆಚರಣೆ

300x250 AD

ಭಟ್ಕಳ: ಲೋಕ ಕಲ್ಯಾಣಕ್ಕಾಗಿ ಚಾತುರ್ಮಾಸ್ಯವನ್ನು
ಈ ಬಾರಿ ಭಟ್ಕಳದ ಕರಿಕಲ್‌ ಧ್ಯಾನ ಮಂದಿರದಲ್ಲಿ ಆಚರಣೆ ಮಾಡಲು ನಿರ್ಧರಿಸಿದ್ದೇವೆ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಇಲ್ಲಿನ ಆಸರಕೇರಿಯ ನಾಮಧಾರಿ ಗುರುಮಠದ ಸಭಾಭವನದಲ್ಲಿ ಭಟ್ಕಳದ ಕರಿಕಲ್‌ ಧ್ಯಾನ ಮಂದಿರದಲ್ಲಿ ನಡೆಯುವ ಚಾತುರ್ಮಾಸ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಲಾತಲಾಂತರದಿಂದ ಚಾತುರ್ಮಾಸ್ಯವನ್ನು ಆಚರಿಸುತ್ತಿದ್ದು ಮಹಾಭಾರತದಲ್ಲಿಯೂ ಚಾತುರ್ಮಾಸ್ಯದ ಆಚರಣೆಯ ಬಗ್ಗೆ ಉಲ್ಲೇಖವಿದೆ. ಪರಸ್ಪರ ದ್ವೇಷವನ್ನು, ಮತ್ಸರವನ್ನು ಮೋಹದಿಂದ ಪಡೆದುಕೊಳ್ಳಲು ಆಚರಿಸ್ಪಡುತ್ತದೆ ಎಂದರು. ಪ್ರಾರಂಭದಲ್ಲಿ ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ, ಜಿಲ್ಲೆಯಲ್ಲೇ ಪ್ರಥಮಭಾರಿಗೆ ಹಿಂದುಳಿದ ವರ್ಗದವರು ಚಾತುರ್ಮಾಸ್ಯವನ್ನು ಜೂನ್ 21 ರಂದು ಕರಿಕಲ್ ಧ್ಯಾನ ಮಂದಿರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಆಚರಿಸಿಕೊಳ್ಳುತ್ತಿದ್ದು ಇದಕ್ಕೆ ಸಮಾಜದ ಪ್ರತಿ ಕೂಟದವರು ಸಹಕಾರ ನೀಡಬೇಕೆಂದರು.

300x250 AD

ಸಭೆಯಲ್ಲಿ ನಾಮಧಾರಿ ಸಮಾಜದ ಗುರು ಮಠದ ಅಧ್ಯಕ್ಷ ಅರುಣ್ ನಾಯ್ಕ, ಹಿರಿಯರಾದ ಡಿ.ಬಿ.ನಾಯ್ಕ, ಪ್ರಮುಖರಾದ ಎಸ್.ಎಂ.ನಾಯ್ಕ, ಈರಪ್ಪ ಗರ್ಡಿಕರ, ಕೆ.ಆರ್. ನಾಯ್ಕ, ಈಶ್ವರ ನಾಯ್ಕ, ರಾಜೇಶ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ವಿಠಲ್ ನಾಯ್ಕ, ಭವಾನಿಶಂಕರ ನಾಯ್ಕ, ಸತೀಶಕುಮಾರ ನಾಯ್ಕ, ಶ್ರೀಕಾಂತ ನಾಯ್ಕ, ಡಿ.ಎಲ್. ನಾಯ್ಕ, ಶಿವರಾಮ್ ನಾಯ್ಕ, ಎಂ.ಕೆ. ನಾಯ್ಕ, ವಿವಿಧ ಕೂಟಗಳ ಪ್ರಮುಖರು, ದೇವಸ್ಥಾ ನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀರಾಮಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಸ್ವಾಗತಿಸಿದರು. ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು.

Share This
300x250 AD
300x250 AD
300x250 AD
Back to top