ಶಿರಸಿ: ಹಿಂದೂ ಸೇವಾ ಸಮಿತಿ ಶಿರಸಿ ಇವರ ವತಿಯಿಂದ ನಗರದ ನಿವಾಸಿಗಳಿಗೆ ಉಚಿತ ಕುಡಿಯುವ ನೀರನ್ನು ಪೂರೈಸುವ ಕಾರ್ಯಕ್ರಮಕ್ಕೆ ಶುಕ್ರವಾರ, ಅಕ್ಷಯ ತೃತೀಯಾ ದಿನದಂದು ಚಾಲನೆ ನೀಡಲಾಯಿತು.
ಕಳೆದ ವರ್ಷ ಮಲೆನಾಡಿನ ಶಿರಸಿಯಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಈ ವರ್ಷದ ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯತ್ಯಯ ತುಂಬಾ ಕಂಡುಬರುತ್ತದೆ. ಶಿರಸಿ ನಗರದ ಅನೇಕ ಪ್ರದೇಶಗಳಲ್ಲಿ ಅಂತರ್ಜಲದ ತೀವ್ರ ಇಳಿಕೆಯಿಂದಾಗಿ ಹಾಗೂ ನಗರಕ್ಕೆ ನೀರು ಪೂರೈಕೆಯ ಅನೇಕ ಜಲಮೂಲಗಳು ಬತ್ತಿವೆ.
ವಿಪರೀತ ಬಿಸಿಲಿನಿಂದಾಗಿ ನಗರದಲ್ಲಿ ಕುಡಿಯುವ ಹಾಗೂ ಬಳಕೆಗೆ ಬಳಸುವ ನೀರು ತುಂಬಾ ಅವಶ್ಯಕತೆ ಇರೋದನ್ನು ಮನಗಂಡು ಹಿಂದೂ ಸೇವಾ ಸಮಿತಿ ವತಿಯಿಂದ ಗಂಗೆ ಭೂಸ್ಪರ್ಶ ಮಾಡಿದ ದಿನವಾದ ಅಕ್ಷಯ ತೃತೀಯಾ ಶುಭದಿವಸದಂದು ನಗರದಲ್ಲಿ ಕುಡಿಯಲು ಅವಶ್ಯಕತೆ ಇರುವೆಡೆ ವಿತರಿಸಲು ಪ್ರಾರಂಭಿಸಲಾಗಿದೆ. ಇದರ ಸದುಪಯೋಗವನ್ನು ನಗರದ ಜನತೆ ಪಡೆದುಕೊಳ್ಳುವುದರ ಜೊತೆಗೆ ನೀರನ್ನು ಮಿತವಾಗಿ ಬಳಸಿ ಬೇರೆಯವರಿಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಆಗಬೇಕಾಗಿದೆ. ಉಚಿತ ನೀರು ಪೂರೈಕೆಯನ್ನು ಒಂದು ತಿಂಗಳವರೆಗೆ ವಿತರಿಸಲು ಯೋಜನೆಯನ್ನು ಮಾಡಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ವಿನಂತಿ. ಕುಡಿಯುವ ನೀರಿನ ಸಂಪರ್ಕಕ್ಕಾಗಿTel:+919986864516 /Tel:+919880193357 /Tel:+917892963729 ದೂರವಾಣಿ ಸಂಪರ್ಕಿಸಲು ಕೋರಿದೆ.