Slide
Slide
Slide
previous arrow
next arrow

ಮನಸೂರೆಗೊಂಡ ಮಕ್ಕಳ ಯಕ್ಷಗಾನ      

300x250 AD

ಶಿರಸಿ: ಯಕ್ಷಾಂಕುರ ಐನ್‌ಬೈಲ್ ಇವರು ಶಿರಸಿಯಲ್ಲಿ ನಡೆಸಿದ ಮಕ್ಕಳ ಯಕ್ಷಗಾನ ತರಬೇತಿಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಏ.28ರಂದು ಇಲ್ಲಿನ ಟಿ.ಎಮ್.ಎಸ್ ಸಭಾಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಾಲಚಂದ್ರ ಹೆಗಡೆ ಕೆಶಿನ್ಮನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಯಕ್ಷಗಾನವು ನಾಲ್ಕು ವೈವಿದ್ಯಮಯ ಕಲೆಗಳಿಂದ ಕೂಡಿದ ವಿಶಿಷ್ಟ ಕಲೆ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಗಳಿಂದ ಕೂಡಿ ವಿಶಿಷ್ಟವಾಗಿ ಬೆಳೆದುಬಂದಿದೆ. ಸಭಾಲಕ್ಷಣ ಮತ್ತು ಕಥಾಭಾಗ ಎಂಬ ಎರಡು ವಿಭಾಗಗಳಿವೆ. ಯಕ್ಕಲನಾದ ಎಂಬ ಪದದಿಂದ ಯಕ್ಷಗಾನ ಎಂಬ ಪದವು ಬಳಕೆ ಬಂದಿದೆ. ಹಳ್ಳಿ ಮತ್ತು ಪಟ್ಟಣ ಎಂಬ ಬೇಧವಿಲ್ಲದೇ ಯಕ್ಷಗಾನವು ಬೆಳೆದು ಬಂದಿದೆ. ಯಕ್ಷಗಾನದಲ್ಲಿ ಭಕ್ತಿ, ಧ್ಯಾನವಿದೆ ಎಂದು ಬಾಲಚಂದ್ರ ಹೆಗಡೆ ಅಭಿಪ್ರಾಯ ಹಂಚಿಕೊಂಡರು.

300x250 AD

ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾಗಿದ್ದ ಶ್ರೀಧರ ಹೆಗಡೆ ಚಪ್ಪರಮನೆ ಮಾತಾನಾಡಿ ಕಲೆಯ ಆಳ ಮತ್ತು ಅಗಲ ತಿಳಿದುಕೊಳ್ಳುವುದು ಕಷ್ಟಕರ ವಿಷಯ. ಅದನ್ನು ಕಲಾವಿದನು ತಿಳಿದು ಅದನ್ನು ಸಮಾಜಕ್ಕೆ ತಿಳಿಸಿಬೇಕು. ನಮ್ಮ ಸಂಸ್ಕೃತಿಯ ಹೊರತಾಗಿನ ವಿಚಾರಗಳು ಮಕ್ಕಳ ತಲೆಯಲ್ಲಿ ಹರಿದಾಡುವುದಕ್ಕಿಂತ ಅವರಲ್ಲಿ ನಮ್ಮ ಸಂಸ್ಕೃತಿಯ ಕುರಿತಾದ ವಿಚಾರಗಳು ಹರಿದಾಡಬೇಕು. ಅದನ್ನು ಇಂತಹ ಶಿಬಿರಗಳು ಮಾಡುತ್ತವೆ. ಮಕ್ಕಳು ಆ ದಿಶೆಯಲ್ಲಿ ಪ್ರಯತ್ನ ಶೀಲರಾಗಬೇಕು ಎಂದರು. ಬಡಗು ಮತ್ತು ತೆಂಕುತಿಟ್ಟಿನ ಯಕ್ಷಗಾನ ಬೆಳೆದು ಬಂದ ಕುರಿತಾಗಿ, ಯಕ್ಷಗಾನ ಸಂಸ್ಕೃತಿಯು ಬೆಳೆಯಬೇಕಾದ ಕುರಿತಾಗಿ ಅನಿಸಿಕೆಗಳನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿ. ಟಿ. ಹೆಗಡೆ ತಟ್ಟೀಸರ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ವ್ಯಕ್ತಪಡಿಸಿದರು.ಹತ್ತು ದಿನಗಳ ಕಾಲ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಂದ ಬಾಲಗೋಪಾಲ ಕುಣಿತ, ಚಕ್ರವ್ಯೂಹ ಮತ್ತು ಸೈಂಧವವಧೆ ಆಖ್ಯಾನ ಪ್ರಸ್ತುತಗೊಂಡಿತು. ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಪರಮೇಶ್ವರ ಹೆಗಡೆ ಐನ್‌ಬೈಲ್ ಇವರು ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡಿದ್ದರು.ರಾಜೇಶ್ವರಿ ಪಿ. ಹೆಗಡೆ ಇವರು ಪ್ರಾರ್ಥಿಸಿದರು. ನಾಗೇಂದ್ರ ಭಟ್ ಸಂಕದಗುಂಡಿ ಸ್ವಾಗತ ಮತ್ತು ವಂದನಾರ್ಪಣೆ ನೆರವೇರಿಸಿದರು.  ಕೆ.ಎಲ್. ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top