ಯಲ್ಲಾಪುರ: ತಾಲೂಕಿನ ಬೀಗಾರಿನ ಕಲ್ಮನೆಯ ಮನೆಯಂಗಳದಲ್ಲಿ ಏ.9 ಮಂಗಳವಾರ ಒಂದು ದಿನದ ಸಾಹಿತ್ಯ ಚಿಂತನ ಕಾರ್ಯಕ್ರಮವು ನಡೆಯಲಿದೆ.
ಎರಡನೇ ವರ್ಷದ ಈ ಸಾಹಿತ್ಯೋತ್ಸವವನ್ನು ಬೆಳಿಗ್ಗೆ 10.30ಕ್ಕೆ ಸಾಹಿತಿ ವನರಾಗ ಶರ್ಮಾ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ವಹಿಸಲಿದ್ದಾರೆ. ಮುಖ್ಯ ವಕ್ತಾರರಾಗಿ ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ , ಅತಿಥಿಗಳಾಗಿ ಮೈತ್ರಿ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ, ಕವಿಗಳಾದ ವಿ.ಜಿ.ಗಾಂವ್ಕರ ಬಾಗಿನಕಟ್ಟಾ, ಸುಬ್ರಾಯ ಬಿದ್ರೆಮನೆ,ಜಿ.ಎನ್. ಕೋಮಾರ ವಜ್ರಳ್ಳಿ ಭಾಗವಹಿಸುವರು.
ಮಧ್ಯಾಹ್ನ ೩ರಿಂದ ಬರಹಗಾರ್ತಿ ಅಕ್ಷತಾ ಕೃಷ್ಣಮೂರ್ತಿಯವರ ಸಾಹಿತ್ಯ ಕೃತಿಗಳ ಅವಲೋಕನ ಉಪನ್ಯಾಸಕ ಶ್ರೀಪಾದ ಭಟ್ಟ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಉಪಸ್ಥಿತರಿರುವರು. ಶಿಕ್ಷಕ ರವೀಂದ್ರ ಗಾಂವ್ಕರ ಪರಿಚಯಿಸಿದ್ದಾರೆ . ಅತಿಥಿಗಳಾಗಿ ನಾಟಕಕಾರ ಟಿ.ವಿ. ಕೋಮಾರ, ನಿವೃತ್ತ ಶಿಕ್ಷಕ ಡಿ.ಜಿ.ಭಟ್ಟ, ಉಪನ್ಯಾಸಕರಾದ ಜಿ.ಕೆ.ಗಾಂವ್ಕರ ,ಡಾ.ಡಿ.ಕೆ ಗಾಂವ್ಕರ ಉಪಸ್ಥಿತರಿರುವರು. ಅಕ್ಷತಾ ಕೃಷ್ಣಮೂರ್ತಿಯವರ ಕೃತಿ ಅವಲೋಕನದಲ್ಲಿ ಅವರ ಕೋಳ್ಕಂಬ ಕವನ ಸಂಕಲನದ ಕುರಿತು ಶಿಕ್ಷಕರಾದ ಸಣ್ಣಪ್ಪ ಭಾಗ್ವತ, ಕೇದಗೆಯ ಕಂಪು ವಿಮರ್ಶಾ ಕೃತಿಯ ಕುರಿತಾಗಿ ಬರಹಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ, ನುಡಿಚಿತ್ರ ಇಸ್ಕೂಲು ಕೃತಿಯ ಕುರಿತಾಗಿ ಕವಯತ್ರಿ ರೇಖಾ ಭಟ್ಟ ಹೊನ್ನಗದ್ದೆ , ಹನ್ನೆರಡು ದಡೆ ಬೆಲ್ಲ ಕವನ ಸಂಕಲನದ ಕುರಿತು ಪ್ರತಿಮಾ ಕೋಮಾರ ಮಾತನಾಡಲಿದ್ದಾರೆಂದು ಸಂಘಟಕ ಶಿವರಾಮ ಗಾಂವ್ಕರ ಕಲ್ಮನೆ ತಿಳಿಸಿದ್ದಾರೆ.