ಸಿದ್ದಾಪುರ: ತಾಲ್ಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿಯ ವಾರ್ಷಿಕ ಮಹಾರಥೋತ್ಸವ ಫೆ.24 ರ ಶನಿವಾರ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಂಗಳವಾರ ಅವರು ಮಾಹಿತಿ ನೀಡಿ, ಮಹಾರಥೋತ್ಸವದ ಅಂಗವಾಗಿ ಫೆ. 21 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಫೆ. 26 ರವರೆಗೆ ನಡೆಯಲಿದೆ. ಫೆ. 21 ರಂದು ಪ್ರಾಥನೆ, ದೇವನಾಂದಿ, ಕೌತುಕ ಬಂಧನ, ಧ್ವಜಾರೋಹಣ, ಭೇರಿತಾಡನ, ಯಾಗಶಾಲಾ ಪ್ರವೇಶ, ಶಿಬಿಕಾ ಯಂತ್ರೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 22ಕ್ಕೆ ಸಿಂಹ ಯಂತ್ರೋತ್ಸವ ನಡೆದರೆ, ಫೆ. 23 ರಂದು ಪುಷ್ಪಮಂಜರಿ ಮತ್ತು ಡೋಲಾ ಯಂತ್ರೋತ್ಸವ ನಡೆಯಲಿದೆ. ಫೆ. 24 ರಂದು ಮಹಾರಥೋತ್ಸವ ನಡೆಯುತ್ತದೆ. ಫೆ. 25 ಮತ್ತು 26 ರಂದು ಕುಂಕುಮೋತ್ಸವ, ಅವನೃಥ ತೀರ್ಥಸ್ನಾನ, ಪೂರ್ಣಾಹುತಿ, ಪೂರ್ಣಕುಂಭಾಭಿಷೇಕ, ಅಂಕುರ ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳು ಜರುಗಲಿವೆ. ಲೋಕಕಲ್ಯಾಣಕ್ಕಾಗಿ ಜರುಗುವ ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಅಂಕುರ ಪ್ರಸಾದ ಸ್ವೀಕರಿಸಿ, ತಜ್ಞನ್ಯ ಶ್ರೇಯಸ್ಸಿಗೆ ಪಾತ್ರರಾಗಬೇಕಾಗಿ ಕೋರಿದರು.ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಚಂದ್ರಕಾಂತ ಹೆಗಡೆ ಗುಂಜಗೋಡು ಇದ್ದರು.
ಸಿದ್ದಾಪುರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿಯ ವಾರ್ಷಿಕ ಮಹಾರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ಚಂದ್ರಕಾಂತ ಹೆಗಡೆ ಇದ್ದರು.