Slide
Slide
Slide
previous arrow
next arrow

ದಾಂಡೇಲಿಯಲ್ಲಿ ಹಾರ್ನ್‌ಬಿಲ್ ಜಾಗೃತಿ ಜಾಥಾಕ್ಕೆ ಚಾಲನೆ

300x250 AD

ದಾಂಡೇಲಿ : ಅರಣ್ಯ ಇಲಾಖೆ ಆಶ್ರಯದಡಿ ಹಾಗೂ ವಿವಿಧ ಸಂಘ‌ ಸಂಸ್ಥೆಗಳು ಮತ್ತು ಶಾಲಾ/ಕಾಲೇಜುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಹಾರ್ನ್‌ಬಿಲ್ ಜಾಗೃತಿ ಜಾಥಾಕ್ಕೆ ನಗರ ಸಭೆಯ ಆವರಣದಲ್ಲಿ ಶನಿವಾರ ಚಾಲನೆಯನ್ನು ನೀಡಲಾಯಿತು.ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ ಮತ್ತು ಹಳಿಯಾಳ‌ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್ ಕೆ.ಸಿ ಜಾಗೃತಿ ಜಾಥಾಕ್ಕೆ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ್ ಕುಮಾರ್ ಶಿಂಧೆ, ತಹಶೀಲ್ದಾರ್ ಎಂ.ಎನ್.ಮಠದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ್ ಚೌವ್ಹಾಣ್, ವಿನುತಾ ಚೌವ್ಹಾಣ್, ನಗರ ಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ, ನಗರ ಸಭೆಯ ಸದಸ್ಯರುಗಳಾದ ದಶರಥ ಬಂಡಿವಡ್ಡರ, ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್ಐ ಐ.ಆರ್. ಗಡ್ಡೇಕರ, ಬುದ್ಧಿವಂತಗೌಡ ಪಾಟೀಲ್, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ನಾಯಕ, ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬಿನ ಅಧ್ಯಕ್ಷ ರಾಹುಲ್ ಬಾವಾಜಿ, ಬಂಗೂರನಗರ ಪದವಿ ಕಾಲೇಜಿನ‌ ಉಪ‌ ಪ್ರಾಚಾರ್ಯರಾದ ಡಾ.ಎಸ್.ಎಸ್. ಹಿರೇಮಠ, ಪ್ರಾಧ್ಯಾಪಕ ಡಾ.ಎಸ್.ಎಸ್.ದೊಡ್ಡಮನಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶಾಲಾ ಕಾಲೇಜಿನ ಶಿಕ್ಷಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

300x250 AD

ನಗರಸಭೆ ಆವರಣದಿಂದ ಆರಂಭಗೊಂಡ ಹಾರ್ನಬಿಲ್ ಜಾಗೃತಿ ಜಾಥಾವು ನಗರದ ಜೆ.ಎನ್.ರಸ್ತೆಯ‌ ಮೂಲಕ ಸಾಗಿ ಕೊನೆಯಲ್ಲಿ ಹಾರ್ನಬಿಲ್ ಸಭಾಭವನದ ಆವರಣದಲ್ಲಿ ಸಂಪನ್ನಗೊಳ್ಳಲಿದೆ. ಮೆರವಣಿಗೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳ ತಂಡ, ಡಮಾಮಿ  ನೃತ್ಯ ತಂಡ, ಡೊಳ್ಳು ಕುಣಿತ ತಂಡ,  ಕಂಸಾಳೆ ತಂಡ ಹಾಗೂ ವಿವಿಧ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು.

Share This
300x250 AD
300x250 AD
300x250 AD
Back to top