Slide
Slide
Slide
previous arrow
next arrow

ನವಜಾತ ಶಿಶುಗಳಿಗಾಗಿ ನೂತನ ಚಿಕಿತ್ಸಾ ಪರಿಕರಗಳ‌ ಅಳವಡಿಕೆ

300x250 AD

ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ನವಜಾತ ಶಿಶುಗಳಲ್ಲಿ ಕಂಡುಬರುವ ಸಾಮಾನ್ಯ ಹಳದಿ ಕಾಯಿಲೆಯನ್ನು ಕಂಡುಹಿಡಿಯುವ ಮತ್ತು ಅದರ ಚಿಕಿತ್ಸೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳು ಇಲ್ಲದೆ ಇರುವುದರಿಂದ ಈ ಆಸ್ಪತ್ರೆಯಲ್ಲಿ ಹುಟ್ಟಿದ ನವಜಾತ ಶಿಶುಗಳಲ್ಲಿ ಹೆಚ್ಚಿನ ಪ್ರಮಾಣದ ಹಳದಿ ಕಾಮಲೆ ಕಂಡುಬಂದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಈ ಬಗ್ಗೆ ಈ ಯಂತ್ರಗಳ ಅಳವಡಿಕೆಗಾಗಿ ಶಾಸಕರಾದ ಆರ್.ವಿ.ದೇಶಪಾಂಡೆವರಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಮನವಿಯನ್ನು ಮಾಡಿದ್ದರು. ತಕ್ಷಣವೇ ಸ್ಪಂದಿಸಿದ ಆರ್.ವಿ. ದೇಶಪಾಂಡೆ ಅವರು ನವಜಾತ ಶಿಶುಗಳಲ್ಲಿ ಕಂಡುಬರುವ ಸಾಮಾನ್ಯ ಹಳದಿ ಕಾಮಲೆಯನ್ನು ಕಂಡುಹಿಡಿಯುವ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವ ಎರಡು ಚಿಕಿತ್ಸಾ ಯಂತ್ರಗಳನ್ನು ಆರೋಗ್ಯ ಇಲಾಖೆಯವರಿಗೆ ಸೂಚನೆಯನ್ನು ನೀಡಿದ್ದರು. ಇದೀಗ ಈ ಎರಡು ಯಂತ್ರಗಳು ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಸೇವೆಗೆ ಅಣಿಯಾಗಿದೆ.

ಈ ಎರಡು ಯಂತ್ರಗಳಿಂದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಜನಿಸುವ ನವಜಾತ ಶಿಶುಗಳು ಸಾಮಾನ್ಯ ಹಳದಿ ಕಾಮಲೆಗೆ ತುತ್ತಾದ ಪಕ್ಷದಲ್ಲಿ ತಕ್ಷಣವೇ ಚಿಕಿತ್ಸೆಯನ್ನು ನೀಡಲು ಅನುಕೂಲವಾಗಲಿದೆ ಎಂದು ಬುಧವಾರ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಖಿಲ್ ಕಿತ್ತೂರ್ ಮತ್ತು ಹಿರಿಯ ವೈದ್ಯರಾದ ಡಾ.ಎಸ್.ಡಿ ಬಂಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top