ಶಿರಸಿ: ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ವ್ಯಾನಿಟ್ ಬ್ಯಾಗ್ ನಿಂದ ಹಣ, ಬಂಗಾರದ ಆಭರಣಗಳನ್ನು ಅಪಹರಿಸುತ್ತಿದ್ದ ಮಹಿಳೆಯರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶಾಂತಿ ಯಾನೆ ಕರ್ಕಿ ಕೊಂ ವೆಂಕಟರಮಣ ಕಲ್ಲವಡ್ಡರ ಹಾಗು ಮಿನಾಕ್ಷಿ ಪರಮೇಶ್ವರ ಕಲ್ಲವಡ್ಡರ ಬಂಧಿತ ಆರೋಪಿ ಮಹಿಳೆಯರಾಗಿದ್ದು, ಇವರಿಂದ ೬ ಲಕ್ಷ ರೂ. ಬೆಲೆಯ ೧೦ ತೊಲೆ ಬಂಗಾರ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಮುಂಡಗೋಡ ಮತ್ತು ಶಿರಸಿ ಹಳೆ ಬಸ್ ನಿಲ್ದಾಣ ಮತ್ತು ನಿಲೇಕಣಿ ಬಸ್ ನಿಲ್ದಾಣ ಸೇರಿ ನಾಲ್ಕು ಕಡೆಗಳಲ್ಲಿ ಕಳ್ಳತನ ಮಾಡಿರುವ ಇವರನ್ನು,ಡಿ.ವೈ.ಎಸ್.ಪಿ.ಗಣೇಶ ನೇತೃತ್ವದಲ್ಲಿ ಮುಂಡಗೋಡ ಸಿಪಿಆಯ್ ಟಿ.ಎಸ್.ಲೋಕಾಪುರ್,ಪಿಎಸ್ಆಯ್ ಗಳಾದ ಪರಶುರಾಮ ಮಿರ್ಜಗಿ,ಹನುಮಂತ ಕುಡಗುಂಟಿ ಮತ್ತಿತರ ಸಿಬ್ಬಂದಿಗಳ ಸಹಕಾರದಲ್ಲಿ ಬಂಧಿಸಲಾಗಿದೆ.