Slide
Slide
Slide
previous arrow
next arrow

ನಾಲ್ಕು ವರ್ಷ ಪಕ್ಷಕ್ಕಾಗಿ ದುಡಿದಿದ್ದು ತೃಪ್ತಿ ತಂದಿದೆ: ವೆಂಕಟೇಶ ನಾಯಕ್

300x250 AD

ಕಾರವಾರ: ಹೊಸ ಜಿಲ್ಲಾಧ್ಯಕ್ಷರ ಆಯ್ಕೆಯಾಗಿದ್ದು, ರಾಷ್ಟ್ರೀಯ, ರಾಜ್ಯ ಮುಖಂಡರ ಮಾರ್ಗದರ್ಶನದಲ್ಲಿ ನಾಲ್ಕು ವರ್ಷ ಪಕ್ಷಕ್ಕಾಗಿ ದುಡಿದಿರುವುದು ತೃಪ್ತಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ್ ಅಭಿಪ್ರಾಯಿಸಿದರು. ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷರ ಹುದ್ದೆ ಅಧಿಕಾರ ಮೂರು ವರ್ಷವಾಗಿದ್ದು, ಆದರೆ ವಿಧಾನಸಭಾ ಚುನಾವಣೆ, ಕೋವಿಡ್ ಮೊದಲಾದ ಕಾರಣದಿಂದ ನಾನು ಹೆಚ್ಚುವರಿ 1ವರ್ಷ ಕೆಲಸ ಮಾಡುವಂತೆ ಆಯಿತು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷ ಸಂಗಟನೆಯ ಜೊತೆ ಜೊತೆಗೆ ಕೋವಿಡ್ ಅವಧಿಯಲ್ಲಿ ಸಾರ್ವಜನಿಕರ ಸೇವೆ ಕೂಡಾ ಮಾಡುವಂತೆ ಸೂಚಿಸಿದ್ದರು. ಎಲ್ಲಾ ನಾಯಕರ, ಮುಖಂಡರ, ಕಾರ್ಯಕರ್ತರ ಸಹಕಾರದಿಂದ ಕೋವಿಡ್ ಅವಧಿಯಲ್ಲಿ ಬಿಜೆಪಿ ಸಾರ್ವಜನಕರ ಸೇವೆ ಮಾಡುವಂತೆ ಆಗಿದೆ ಎಂದರು. ಬಳಿಕ ನಡೆದ ಗಾಮ ಪಂಚಾಯತ ಚುನಾವಣೆ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟಿತು. 1500 ಸದಸ್ಯ ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ. ವಿಧಾನ ಪರಿಷತಗೆ ಗಣಪತಿ ಉಳ್ವೇಕರ ಗೆಲುವು, ಪಶ್ಚಿಮ ಪದವಿಧರ ಕ್ಷೇತ್ರಕ್ಕೆ ವಿ.ಎಸ್. ಸಂಕನೂರ ಗೆಲುವು, ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಗೆಲವು ಮುಖಂಡರ, ಕಾರ್ಯಕರ್ತರ ಶ್ರಮದಿಮದ ಸಾಧ್ಯವಾಗಿದೆ. ಪಕ್ಷ ಸಂಘಟನೆಗಾಗಿ ಸಾಕಷ್ಟು ಒತ್ತು ನೀಡಲಾಗಿದ್ದು, ಪ್ರತಿ ಹಂತದಲ್ಲೂ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದೇವೆ. ರಾಜ್ಯ ಮಟ್ಟದ ಹತ್ತುಹಲವು ಸಭೆ, ಸಮಾವೇಶ ಯಶಸ್ವಿಯಾಗಿ ಆಯೋಜಿಸಿದ್ದೇವೆ ಎಂದರು.

ಜ. 29 ರಂದು ನೂತನ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಅವರ ಪದಗ್ರಹಣ ಹಾಗೂ ಅಭಿನಂದನೆ ಕಾರ್ಯಕ್ರಮ ಕುಮಟಾದ ಹವ್ಯಕ ಸಭಾಂಗಣ ಆಯೋಜಿಸಲಾಗಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿಸನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಗಜಾನನ ಗುನಗ, ಮನೋಜ ಭಟ್ಟ, ನಾಗೇಶ ಕುರುಡೇಕರ, ನಾಗರಾಜ ನಾಯಕ, ನಯನಾ ನೀಲಾವರ ಪತ್ರಿಕಾಗೋಷ್ಟಿಯಲ್ಲಿದ್ದರು.

300x250 AD
Share This
300x250 AD
300x250 AD
300x250 AD
Back to top