ಯಲ್ಲಾಪುರ: ತಾಲೂಕಿನ ಚಿಕ್ಕಮಾವಳ್ಳಿ ಗ್ರಾಮದ ಸ.ಹಿ.ಪ್ರಾ. ಶಾಲೆಯ 75 ನೇ ವರ್ಷದ ಸಂಭ್ರವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ “ವಿಜ್ಞಾನ ವಸ್ತುಪ್ರದರ್ಶನ” ಮತ್ತು “ಸ್ಮಾರ್ಟ್ ಕ್ಲಾಸ್” ಉದ್ಘಾಟಿಸಿದ ಶಾಸಕರಾದ ಶಿವರಾಮ ಹೆಬ್ಬಾರ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಶುರುವಾದ ಈ ಶಾಲೆ ದೇಶದ ಜೊತೆಗೆ ಅಮೃತ ಮಹೋತ್ಸವ ಆಚರಿಕೊಳ್ಳುತ್ತಿರುವುದು ಅತೀವ ಸಂತಸ ಉಂಟುಮಾಡಿದೆ, ಶಿಕ್ಷಣದಿಂದಲೇ ಪರಿಪೂರ್ಣ ಸಮಾಜ ಕಟ್ಟಬಹುದು ಇದನ್ನ ಅರಿತ ಹಿರಿಯರು ಈ ಶಾಲೆಯ ಏಳ್ಗೆಗಾಗಿ ದುಡಿದಿದ್ದಾರೆ ಎಂದು ಹಿರಿಯರನ್ನು ಸ್ಮರಿಸಿದರು. ಮಕ್ಕಳ ಕೈಬರಹದ ಪತ್ರಿಕೆ “ಅಮೃತ ದೀವಿಗೆ”ಯನ್ನು ಬಿಡುಗಡೆಗೊಳಿಸಿದ ಅವರು ವಿದ್ಯೆ ಇಲ್ಲದವನು ಹದ್ದಿಗಿಂತ ಕಡೆ ಎಂದು ಸರ್ವಜ್ಞನ ತ್ರಿಪದಿಯನ್ನು ಪುನರುಚ್ವರಿಸಿದರು. ಈ ಸಂದರ್ಭದಲ್ಲಿ ಮಾಜಿ ಯೋಧರನ್ನು, ಶಾಲೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಮತ್ತು ಹಾಲಿ ಶಿಕ್ಷಕ ವೃಂದವನ್ನು, ಊರಿನ ಹಿರಿಯನಾಗರೀಕರನ್ನು ಸನ್ಮಾನಿಸಲಾಯಿತು.
ಕಣ್ಣೀಗೆರಿ ಗ್ರಾ.ಪಂ ಅಧ್ಯಕ್ಷರಾದ ಸುನಂದ ಮರಾಠಿ ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾಜ ಸೇವಕ ವಿಜಯ ಮಿರಾಶಿ, ಗ್ರಾ.ಪಂ ಪಿ.ಡಿ.ಒ ಶಿವಕುಮಾರ ವಿರಕ್ತಮಠ, ಸಂಪನ್ಮೂಲ ವ್ಯಕ್ತಿಗಳಾದ(CRP) ಶ್ರೀನಿವಾಸಪ್ರಸಾದ್, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್.ಆರ್. ಭಟ್ಟ ಉಪಸ್ಥಿತರಿದ್ಧರು. ಮಾಜಿ ಶಿಕ್ಷಕರಾದ ಲಕ್ಷ್ಮಣ ಕೋಟದಮಕ್ಕಿ, ವಿಜಯ ಎಸ್. ನಾಯಕ, ಶ್ರೀಮತಿ ಹೊನ್ನಮ್ಮನಾಯಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಮೆಲುಕು ಹಾಕಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕು.ಶ್ರುತಿ ಭಟ್ ಮತ್ತು ಶಾಲೆಯ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು, ಶಿಕ್ಷಕ ಶಂಕರಾನಂದ ದೇವದಾಸ್ ನಿರೂಪಿಸಿದರು, ಶಿಕ್ಷಕಿ ಶೋಭಾ ನಾಯಕ ವರದಿ ವಾಚನ ಮಾಡಿದರು, ಮುಖ್ಯ ಶಿಕ್ಷಕ ಮಧುಕರ ಹೆಗಡೆ ವಂದಿಸಿದರು.