Slide
Slide
Slide
previous arrow
next arrow

ರಂಗಭೂಮಿ ಒಂದು ಸವಾಲಿನ ಕ್ಷೇತ್ರ: ಗಣೇಶ ಅಮೀನಗಡ

300x250 AD

ಸಿದ್ದಾಪುರ: ನಗರ ಪ್ರದೇಶಗಳಕ್ಕಿಂತ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಸಕ್ರಿಯವಾಗಿರುತ್ತವೆ. ನಾಟಕ, ಯಕ್ಷಗಾನ ಸೇರಿದಂತೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆರೋಗ್ಯಕರವಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮ ಗ್ರಾಮೀಣರದ್ದು ಎಂದು ಪತ್ರಕರ್ತ, ಪ್ರಕಾಶಕ ಗಣೇಶ ಅಮೀನಗಡ ಹೇಳಿದರು.

ಅವರು ಸ್ಥಳೀಯ ಶಂಕರಮಠದ ಸಭಾಭವನದಲ್ಲಿಒಡ್ಡೋಲಗ ಹಿತ್ಲಕೈ ರಂಗ ಪರ್ಯಟನ 2023-24ರ ಪ್ರಸಿದ್ಧ ಸಾಹಿತಿ ವಿವೇಕ ಶಾನಭಾಗ ರಚನೆಯ, ಪ್ರಸಿದ್ಧ ನಟ,ನಿರ್ದೇಶಕ ಗಣಪತಿ ಬಿ. ಹಿತ್ಲಕೈ ನಿರ್ದೇಶನದ ಬಹುಮುಖಿ ನಾಟಕದ ಪ್ರಥಮ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಂಗಭೂಮಿ ಸವಾಲಿನ ಕ್ಷೇತ್ರ. ಅದರಲ್ಲೂಗ್ರಾಮೀಣ ಭಾಗದಲ್ಲಿ ನಾಟಕಗಳ ಕುರಿತಾಗಿ ಆಸಕ್ತಿ ಮೂಡಿಸುವುದು ಕಷ್ಟ.ಎಲ್ಲ ಸವಾಲುಗಳ ನಡುವೆ ಗಣಪತಿ ಹಿತ್ಲಕೈ ಸಾಕಷ್ಟು ಗೆಲುವು ಸಾಧಿಸಿದ್ದು ಇಲ್ಲಿರುವ ಪ್ರೇಕ್ಷಕರು ಸಾಕ್ಷಿ. ತಮ್ಮೊಟ್ಟಿಗೆ ಮಕ್ಕಳನ್ನು ಕರೆತಂದಿರುವ ಪಾಲಕರು ಮಕ್ಕಳಲ್ಲಿ ಇನ್ನಷ್ಟು ರಂಗಭೂಮಿಯ ಆಸಕ್ತಿಯನ್ನು ಹುಟ್ಟಿಸಲಿ ಎಂದರು.

300x250 AD

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕದಂಬ ಸೈನ್ಯ ರಾಜ್ಯ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬೇಕ್ರಿ ರಮೇಶ ಮಂಡ್ಯ ಮಾತನಾಡಿ ಕನ್ನಡದ ಸಂಸ್ಕೃತಿ, ಸಾಹಿತ್ಯ, ನೆಲ,ಜಲ ಎಲ್ಲವನ್ನೂ ರಕ್ಷಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಕನ್ನಡದ ಕುರಿತಾಗಿ ಏನೇ ಲೋಪವಾದರೂ ಅದರ ಬಗ್ಗೆ ಹೋರಾಟ ನಡೆಸುವುದರ ಜೊತೆಗೆ ಕನ್ನಡವನ್ನು ಕಟ್ಟುವ ಇಂಥ ಕಾರ್ಯಕ್ರಮಗಳಿಗೆ ಬೆಂಬಲವಾಗಿರುತ್ತೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ,ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ ಕನ್ನಡದ ಓರ್ವ ಪ್ರಬುದ್ಧ,ಪ್ರತಿಭಾವಂತ ಬರಹಗಾರ ವಿವೇಕ ಶಾನಭಾಗ ರಚಿಸಿದ ‘ಬಹುಮುಖಿ’ ಕೇವಲ ಪತ್ರಿಕಾರಂಗದ ವ್ಯಕ್ತಿಗಳು ಮಾತ್ರವಲ್ಲದೇ ಇಡೀ ವಾಸ್ತವ ಜನಜೀವನವನ್ನು ನಿರೂಪಿಸುವ ನಾಟಕ. ಓರ್ವ ವ್ಯಕ್ತಿಯಲ್ಲಿ ಆತನಿಗೆ ಅರಿವಿಲ್ಲದೇ ಇರುವ ವಿಭಿನ್ನ ಮನಸ್ಥಿತಿಗಳನ್ನು ನಿರೂಪಿಸುತ್ತದೆ.ಈ ನಾಟಕವನ್ನು ಸಾಕಷ್ಟು ಬಾರಿ ಓದಿದ್ದರೂ ರಂಗದಲ್ಲಿ ಅದರ ಪ್ರತಿಫಲನ ಹೇಗಿದೆ ಎನ್ನುವ ಕುತೂಹಲ ಇದೆ ಎಂದರು. ಪ್ರೊ.ಎಂ.ಕೆ.ನಾಯ್ಕ ಸ್ವಾಗತಿಸಿದರು. ಒಡ್ಡೋಲಗ ರಂಗ ತಂಡದ ಪ್ರಜ್ಞಾ ಹೆಗಡೆ ನಿರೂಪಿಸಿ,ವಂದಿಸಿದರು.ನಂತರ ಬಹುಮುಖಿ ನಾಟಕ ಪ್ರದರ್ಶನಗೊಂಡಿತು.

Share This
300x250 AD
300x250 AD
300x250 AD
Back to top