ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕವಲಕ್ಕಿಯಲ್ಲಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದವರು ಸಂಭ್ರಮದಿಂದ ಶ್ರೀರಾಮ ನಾಮ ಸ್ಮರಣೆ ಮಾಡಿದರು.
ಆದರ್ಶ ಪುರುಷ ಶ್ರೀರಾಮನ ಪೂಜಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು. 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮನ ಕಣ್ತುಂಬಿಕೊಳ್ಳುತ್ತಿರುವುದು ಇದು ನಮಗೆಲ್ಲಾ ಇನ್ನೊಂದು ದೀಪಾವಳಿ ಹಬ್ಬದ ಸಂಭ್ರಮದಂತಾಗಿದೆ ಎಂದು ರಾಮಭಕ್ತ ಸಂಘಟಕರು ಹರ್ಷ ವ್ಯಕ್ತಪಡಿಸಿದರು.