ಶಿರಸಿ: ಟಿ.ಎಸ್.ಎಸ್.ಕೃಷಿ ವಿಭಾಗದಲ್ಲಿ ಗೊಬ್ಬರ ಖರೀದಿ ಹಾಗೂ ಸುಪರ್ ಮಾರ್ಕೆಟ್ನಲ್ಲಿ ಜಿ.ಆರ್.ಬಿ.ಉತ್ಪನ್ನಗಳ ಖರೀದಿ ಮೇಲಿನ ಲಕ್ಕಿ ಡಿಪ್ ಯೋಜನೆಯ ಅದೃಷ್ಟಶಾಲಿ ವಿಜೇತರನ್ನು ಡ್ರಾ ಮೂಲಕ ಆಯ್ಕೆ ಮಾಡಿ ಬಹುಮಾನಗಳನ್ನು ಘೋಷಿಸಲಾಯಿತು. ಸಂಘದ ಕೃಷಿ ವಿಭಾಗದಲ್ಲಿ 15/08/2023 ರಿಂದ 31/12/2023 ರವರೆಗೆ ಟಿ.ಎಸ್.ಎಸ್. ಗ್ರೀನ್ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ, ಮತ್ತು ಟಿ.ಎಸ್.ಎಸ್. ಕೃಷಿ ಮಿತ್ರ ಗೊಬ್ಬರ, ಖರೀದಿಸಿದ ಗ್ರಾಹಕರಿಗೆ ಪ್ರತಿ 2 ಚೀಲಕ್ಕೊಂದು ಕೂಪನ್ಗಳನ್ನು ನೀಡಲಾಗಿತ್ತು. ಸದರಿ ಕೂಪನ್ಗಳನ್ನು ಜ.20, ಶನಿವಾರದಂದು ಸಂಘದ ಪ್ರಧಾನ ಕಛೇರಿಯ ಕೃಷಿ ವಿಭಾಗದಲ್ಲಿ ಲಕ್ಕಿ ಡ್ರಾ ಮಾಡುವ ಮೂಲಕ ವಿಜೇತರುಗಳನ್ನು ಆಯ್ಕೆ ಮಾಡಲಾಯಿತು. ಮೊದಲನೇ ಬಹುಮಾನ ರೆಫ್ರಿಜರೇಟರ್- 5 ಜನರು,ಎರಡನೇ ಬಹುಮಾನ ಅಲ್ಮೆರಾ- 5 ಜನರು, ಮೂರನೇ ಬಹುಮಾನ ಹೈ ಪ್ರೆಷರ್ ವಾಶರ್- 5 ಜನರು, ನಾಲ್ಕನೇ ಬಹುಮಾನ 1 ಗ್ರಾಂ ಚಿನ್ನದ ನಾಣ್ಯ- 5 ಜನರು ಐದನೇ ಬಹುಮಾನ ಬ್ಯಾಟರಿ ಸ್ಪ್ರೇಯರ್- 5 ಜನರು, ಹಾಗೂ ಆರನೇ ಬಹುಮಾನ ತಾಟು-200 ಜನರು ಒಟ್ಟೂ 225 ಜನರು ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಸಂಘದ ಸುಪರ್ ಮಾರ್ಕೆಟ್ ಹಾಗೂ ಮಿನಿ ಸುಪರ್ ಮಾರ್ಕೆಟ್ಗಳಲ್ಲಿ ದಿನಾಂಕ: 01/10/2023 ರಿಂದ 31/12/2023 ರವರೆಗೆ ರೂ. 199 ಕ್ಕೂ ಮೇಲ್ಪಟ್ಟು ಜಿ.ಆರ್.ಬಿ. ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರಿಗೆ ಕೂಪನ್ಗಳನ್ನು ನೀಡಲಾಗಿತ್ತು.ಸದರಿ ಕೂಪನ್ಗಳನ್ನೂ ಸಹ ಇದೇ ಸಂದರ್ಭದಲ್ಲಿ ಲಕ್ಕಿ ಡ್ರಾ ಮಾಡುವ ಮೂಲಕ ವಿಜೇತರನ್ನುಆಯ್ಕೆ ಮಾಡಲಾಯಿತು. ಮೊದಲ ಬಹುಮಾನವಾಗಿ ಐ.ಎಫ್.ಬಿ. ಕಂಪನಿಯ ಟಾಪ್ ಲೋಡ್ ವಾಷಿಂಗ್ ಮಶಿನ್ ಇಡಲಾಗಿತ್ತು. ವಿಜೇತರಾಗಿ ಶ್ರೀಮತಿ ಪಂಕಜಾ ಪ್ರಕಾಶ ದೇಶಭಾಗ, ಶಿರಸಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂ.ವೈದ್ಯ ಮತ್ತಿಘಟ್ಟ, ಉಪಾಧ್ಯಕ್ಷ ಎಮ್.ಎನ್.ಭಟ್ಟ, ತೋಟಿಮನೆ, ಆಡಳಿತ ಮಂಡಳಿ ನಿರ್ದೇಶಕರುಗಳು, ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ವಿಜಯಾನಂದ ಎಸ್. ಭಟ್ಟ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.