ಭಟ್ಕಳ: ಮದರಸಾ ಉದ್ದೇಶಕ್ಕಾಗಿ ಕಟ್ಟಡ ಪರವಾನಿಗೆ ಪಡೆದು ಮಕ್ಕಾ ಜುಮ್ಮಾ ಮಸೀದಿಯಾಗಿ ಪರಿವರ್ತಿಸಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಾಲಿ ದೇವಿನಗರ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಹಲವಾರು ವರ್ಷಗಳ ಹಿಂದೆ ಜಾಲಿ ಗ್ರಾಮದ ಅರಣ್ಯ ಸರ್ವೇ ನಂಬರಿನಲ್ಲಿ ಮದರಸಾ ಶಿಕ್ಷಣ ನೀಡುವ ಉದ್ದೇಶ ಇಟ್ಟುಕೊಂಡು ಹಯಾತಲ್ ಇಸ್ಲಾಮ್ ಮದರಸಾ ಎಂಬ ಹೆಸರನ್ನಿಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಈ ಕಟ್ಟಡದ ಎರಡನೇ ಮಹಡಿಗೆ ಪಟ್ಟಣ ಪಂಚಾಯತಯಿಂದ ಯಾವುದೇ ಪರವಾನಿಗೆ ಪಡೆಯದೇ ಮಕ್ಕಾ ಜುಮ್ಮಾ ಮಸೀದಿಯಾಗಿ ಪರಿವರ್ತಿಸಿ ಕಾನೂನು ಬಾಹಿರವಾಗಿ ನಡೆಸಿಕೊಂಡು ಬಂದಿರುತ್ತಾರೆ. ಕಾರಣ ಈ ಏರಿಯಾದಲ್ಲಿ 14 ಮನೆಗಳಿದ್ದು ಈಗಾಗಲೇ ಒಂದು ಮಸೀದಿ ಇರುತ್ತದೆ. ಆದ್ದರಿಂದ ಕಾನೂನು ಬಾಹಿರವಾಗಿ ನಿರ್ಮಿಸಿರುವ ಈ ಮಸೀದಿಯ ಮೇಲೆ ಕಾನೂನು ಕ್ರಮ ಕೈಗೊಂಡು ಮಸೀದಿಯಲ್ಲಿರುವ ಮೈಕ್ ತೆರವುಗೊಳಿಸಬೇಕಾಗಿ ಮನವಿಯಲ್ಲಿ ಉಲ್ಲೆಖಿಸಿದ್ದಾರೆ
ಮನವಿ ಸ್ವೀಕರಿಸಿ ಮಾತನಾಡಿದ ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಂಜಪ್ಪ ಮನವಿ ಪತ್ರವನ್ನು ಪರಿಶೀಲಿಸಿ ಈ ಜಾಗ ಯಾರದು ಹಾಗೂ ಯಾವ ಇಲಾಖೆಗೆ ಸೇರಿದೆ ಎಂದು ಪರಿಶೀಲಿಸುತ್ತೇನೆ ಮತ್ತು ಅರಣ್ಯ ಇಲಾಖೆ ಸೇರಿದ ಜಾಗವಾದರೆ ಅವರಿಗೆ ಇಂದೇ ಪತ್ರ ಬರೆಯುತ್ತೇನೆ ಬಳಿಕ ಅವರಿಗೆ ಸೇರಿದ್ದಾದರೆ ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತ ಸದಸ್ಯ ದಯಾ ನಾಯ್ಕ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.