ಭಟ್ಕಳ: ಗೋಪಾಲಕೃಷ್ಣ ಮುಗುಳಿಕೋಣೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವವು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತಾದಿಗಳ ಸಮೂಹದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಮೊದಲು ಅಯ್ಯಪ್ಪ ಮಾಲಾಧಾರಿಗಳು ಹೊತ್ತ ಪಲ್ಲಕ್ಕಿ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ನಂತರ ನೇರವಾಗಿ ಗದ್ಗಿ ರಸ್ತೆ ಮುಖಾಂತರ ಕಳಿ ಹನುಮಂತ ದೇವಸ್ಥಾನ ಮಾರ್ಗದಿಂದ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಆಸರಕೇರಿ ಸಮೀಪವಿರುವ ಮಾಕಾಳಮ್ಮಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪುನಃ ಗೋಪಾಲಕೃಷ್ಣ ಮುಗುಳಿಕೋಣೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಬಂದು ತಲುಪಿತು. ಪಲ್ಲಕ್ಕಿ ಉತ್ಸವದ ಮೆರವಣಿಗೆ ಉದ್ದಕ್ಕೂ ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿ ಭಜನೆ ಮಾಡಿದರು.ಹಾಗೂ ಮೆರವಣಿಗೆಯಲ್ಲಿ ಕೇರಳ ಶೈಲಿಯ ಥೈಯಂ ಕಲಾಕೃತಿಗಳು ಗಮನ ಸೆಳೆಯಿತು.