Slide
Slide
Slide
previous arrow
next arrow

ಜೋಡಿ ಕೊಲೆ ಪ್ರಕರಣದ ಆರೋಪಿಗಳಿಗೆ ಜ.2ರಂದು ಶಿಕ್ಷೆ ಪ್ರಕಟ: ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೋ? ಮರಣದಂಡನೆಯೋ?

300x250 AD

ಅಂಕೋಲಾ: ತಾಲೂಕಿನ ಮೊಗಟಾ ಗ್ರಾಪಂ ಆಂದ್ಲೆಯಲ್ಲಿ ಡಿಸೆಂಬರ್ 19, 2019ರಂದು ಜಿಲ್ಲೆಯೇ ತಲ್ಲಣಗೊಳ್ಳುವಂತ ಕೃತ್ಯ ಒಂದು ನಡೆದು ಹೋಗಿತ್ತು.ಅಮಾಯಕ ಜೀವಗಳೆರಡು ಕ್ರೂರಿಗಳಿಂದ ಭಯಾನಕವಾಗಿ ಹತ್ಯೆಯಾಗಿದ್ದರು.

ಆರೋಪಿಗಳನ್ನು ಪತ್ಯೆ ಹಚ್ಚಿ ಕಾರಾಗೃಹದಲ್ಲಿಟ್ಟು ಕಳೆದ 4 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು ಪ್ರಕರಣದಲ್ಲಿ ಭಾಗಿಯಾದ 4 ಆರೋಪಿಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಜನವರಿ ೨ ರಂದು ಈ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದ್ದು ಸಾರ್ವಜನಿಕರು ಈ ತೀರ್ಪನ್ನು ಕಾಯುತ್ತಿದ್ದಾರೆ.

ತನ್ನ ಕುಟುಂಬದ ಹಿರಿಯರಾದ ದೊಡ್ಡಪ್ಪ ಮತ್ತು ದೊಡ್ಡಮ್ಮನನ್ನು ಕೊಲೆಗೈದು ತನ್ನ ಸಹಚರರೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಕೊನೆಗೂ ಜೈಲು ಪಾಲಾದ ಸುಖೇಶ ನಾಯಕ ಕುಟುಂಬದಲ್ಲಿ ಆತಂಕವಿದೆ .ಮೃತ ಸಾವಿತ್ರಿ ಮತ್ತು ನಾರಾಯಣ ನಾಯಕ ಕುಟುಂಬದಲ್ಲಿ ತಮ್ಮ ಕುಟುಂಬದ ಹಿರಿಯರನ್ನು ಕ್ರೌರ್ಯವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬ ಆಶಯವಿದೆ. ಒಟ್ಟಾರೆ ಒಂದೇ ಕುಟುಂಬದಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದ ಎಲ್ಲರ ಮನಸ್ಸು ಚಿದ್ರ ವಾಗಿ ಪರಸ್ಪರ ವಿರೋಧ ,ಅಸೂಯೆ ಹುಟ್ಟಿಕೊಳ್ಳಲು ಈ ಕೊಲೆ ಪ್ರಕರಣ ಕಾರಣವಾಗಿದೆ .

300x250 AD

ಪೂರ್ವ ತಯಾರಿ ನಡೆಸಿ ಕೊಲೆಗೆ ಸಂಚು,ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಿ, ಕೊಲೆ ಮಾಡಿದ್ದಾರೆ ಎನ್ನುವ ಆಪಾದನೆ ಸಾಬೀತಾಗಿದ್ದು, ದರೋಡೆ ಮಾಡುವ ಉದ್ದೇಶ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಎಸೆದಿದ್ದು, ಸಾಕ್ಷಿ ನಾಶಕ್ಕೆ ಕಾರಪುಡಿ ಎರಚಿದ್ದು ಈ ಎಲ್ಲ ತಳಹದಿಯ ಮೇಲೆ ನ್ಯಾಯಾಲಯ ಇವರಿಗೆ ಶಿಕ್ಷೆ ಪ್ರಕಟಿಸಲಿದೆ .ಒಟ್ಟು 80 ಸಾಕ್ಷಿಗಳು ಈ ಪ್ರಕರಣದಲ್ಲಿ ಇದ್ದು 57 ಸಾಕ್ಷಿಗಳು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಾರೆ . ನ್ಯಾಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಸರಕಾರಿ ವಿಶೇಷ ಅಭಿಯೋಜಕರು ವಾದ ಮಂಡಿಸಿದ್ದರು .ಆದರೆ 452 ಪುಟದ ಲಿಖಿತ ವಾದವನ್ನು ಸರ್ಕಾರಿ ವಿಶೇಷ ಅಭಿಯೋಜಕರಾದ ಶಿವಪ್ರಸಾದ್ ಆಳ್ವಾ ಕೆ ಮಂಡಿಸಿದ್ದರು. ಈ ಎಲ್ಲಾ ಕಲಂ ಪ್ರಕಾರ ಈ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ಆಗುತ್ತದೆ ಎನ್ನುವುದು ಸರಕಾರಿ ಅಭಿಯೋಜಕರ ಅಭಿಪ್ರಾಯವಾಗಿದೆ, 160 ಗ್ರಾಂ ಬಂಗಾರ 2 ಲಕ್ಷ ನಗದು ಈ ಎಲ್ಲಾ ಆರೋಪಿಗಳಿಂದ ದೊರೆತಿದ್ದು ಎಲ್ಲಾ ವಸ್ತುಗಳು ಮತ್ತು ನಗದು ಹಾಗೂ ಸರ್ಕಾರ ಪರಿಹಾರವನ್ನು ಮೃತ ಸಾವಿತ್ರಿ ಮತ್ತು ನಾರಾಯಣ ನಾಯಕ ವಾರಸುದಾರರಿಗೆ ನೀಡಬೇಕು ಎನ್ನುವುದು ನ್ಯಾಯಾಲಯದ ಆದೇಶವಾಗಿದೆ. ನಾಲ್ಕು ವರ್ಷದ ನಂತರ ಮಹತ್ವದ ತೀರ್ಪು ಹೊರಬಂದಿದ್ದು ಜನವರಿ 2 ಕ್ಕೆ 4 ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬಹುದು ಅಥವಾ ಈ ನಾಲ್ವರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ಶಿಕ್ಷೆ ಆಗಬಹುದು ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

Share This
300x250 AD
300x250 AD
300x250 AD
Back to top