ಹೊನ್ನಾವರ: ಅಡಿಕೆ ವ್ಯಾಪಾರದಲ್ಲಿ ಯಾವುದೇ ಅನ್ಯಾಯವಾಗಿಲ್ಲ ಎಂಬ ಎಪಿಎಂಸಿ ಮಾಜಿ ನಿರ್ದೇಶಕ ಅರವಿಂದ ಪೈಯವರ ಹೇಳಿಕೆ ಸುಳ್ಳು ಎಂದು ಜಿ.ಪಂ. ಮಾಜಿ ಸದಸ್ಯ ಪಿ.ಎಸ್.ಭಟ್ ಉಪ್ಪೋಣ ಆರೋಪಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ನಾನು ಕುಮಟಾ ಎಪಿಎಂಸಿಗೆ ಅಡಿಕೆ ವ್ಯಾಪಾರದಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಪತ್ರ ನೀಡಿದ್ದು, ಪತ್ರದ ಆಧಾರದ ಮೇಲೆ ಅದನ್ನು ಖಚಿತಪಡಿಸಿಕೊಂಡು ಕುಮಟಾ ಎಪಿಎಂಸಿ ದಲಾಲರಿಗೆ ಈಗಾಗಲೇ ಎರಡು ಸಲ ನೋಟಿಸ್ ನೀಡಿದೆ” ಎಂದು ತಿಳಿಸಿದ್ದಾರೆ.
’50 ಕೆ.ಜಿ.ಗೆ 100 ಗ್ರಾಂ ಮುಂಗಾಲು ನೀಡುವುದನ್ನು ಖಚಿತ ಪಡಿಸಿಕೊಂಡು ಎಪಿಎಂಸಿಯು ವ್ಯಾಪಾರಸ್ಥರಿಗೆ ಪತ್ರ ನೀಡಿದ್ದು ಇದೆ. ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿರುವುದು ಖಚಿತವಾಗುತ್ತದೆ. ಅನ್ಯಾಯ ಆಗಿದ್ದರ ಬಗ್ಗೆ ನನ್ನ ಬಳಿ ಸಾಕಷ್ಟು ದಾಖಲೆ ಇದೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ’ ಎಂದಿದ್ದಾರೆ.