ಭಟ್ಕಳ: ಅಕ್ರಮವಾಗಿ ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ದನವನ್ನು ಕಟ್ಟಿದ್ದ ವೇಳೆ ಮಾಹಿತಿಯನ್ನಾಧರಿಸಿ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ದನವನ್ನು ರಕ್ಷಣೆ ಮಾಡಿರುವ ಘಟನೆ ಅಜಾದ್ ನಗರದಲ್ಲಿ ನಡೆದಿದೆ.
ಆರೋಪಿ ಮುಜಿಬುರ್ ರೆಹಮಾನ್ ಅಬ್ದುಲ್ ರಜಾಕ್ ರುಕ್ನುದ್ದಿನ್ (57) ಎಂದು ತಿಳಿದು ಬಂದಿದೆ. ಈತ ಅಬ್ದುಲ್ ರಜಾಕ್ ಮೆನ್ಸನ ಎಂಬುವವರ ಮನೆಯ ಹಿಂಭಾಗದಲ್ಲಿರುವ ಜಾಗದಲ್ಲಿ ಸುಮಾರು 20 ಸಾವಿರ ಮೌಲ್ಯದ 3 ಆಕಳು ಮತ್ತು ಒಂದು ಹೋರಿಯನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಕಳುವು ಮಾಡಿಕೊಂಡು ಹಿಂಸಾತ್ಮಕವಾಗಿ ಕಟ್ಟಿ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದ ವೇಳೆ ಭಟ್ಕಳ ನಗರ ಠಾಣೆ ಪಿ.ಎಸ್.ಐ ಸೋಮರಾಜ ರಾಠೋಡ ದಾಳಿ ಮಾಡಿ 3 ದನ ಹಾಗೂ ಒಂದು ಹೋರಿ ರಕ್ಷಣೆ ಮಾಡಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.