ಭಟ್ಕಳ: ಶ್ರೀ ಕ್ಷೇತ್ರ ಕಡವಿನಕಟ್ಟೆ ಜಗನ್ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಅರ್ಚಕ ವೃಂದ, ಆಡಳಿತ ಮಂಡಳಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರ ಸಹಯೋಗದೊಂದಿಗೆ ವರ್ಷಂಪ್ರತಿಯಂತೆ ಹಮ್ಮಿಕೊಂಡಿದ್ದ ಆಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ಅರ್ಚಕರು ಹಾಗೂ ದೇವಸ್ಥಾನದ ಅರ್ಚಕ ವೇ.ಮೂ. ರಾಮಚಂದ್ರ ಭಟ್ಟ ದೀಪ ಪ್ರಜ್ವಲನದೊಂದಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ದೇವಸ್ಥಾನದ ಅರ್ಚಕ ಹಾಗೂ ಕಾರ್ಯದರ್ಶಿ ಪ್ರಕಾಶ ಭಟ್ಟ ಮಾತನಾಡಿ, ಕಳೆದ 20 ವರ್ಷಗಳಿಂದ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದು ಹತ್ತು ವರ್ಷಗಳಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಕ್ಷೇತ್ರದಲ್ಲಿ ಉತ್ತಮ ಕಾರ್ಯವಾಗಿದೆ. ದೇವತಾ ಸನ್ನಿಧಿಯಲ್ಲಿ ಭಜನೆಯಿಂದ ದೇವತಾ ಸಾನಿಧ್ಯ ವೃದ್ಧಿಯಾಗುತ್ತದೆ ಎಂದ ಅವರು ಶ್ರೀ ದೇವರ ಭಕ್ತ ಜನರಿಗೆ ಒಳಿತಾಗಲಿ ಎಂದು ಹಾರೈಸಿದರು.
ಅಹೋರಾತ್ರಿ ಭಜನಾ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿದ್ದು ಪ್ರಮುಖವಾಗಿ ಸೋಡಿಗದ್ದೆ ಮಹಾಸತಿ ಭಜನಾ ಮಂಡಳಿ, ವೀರ ಜಟ್ಗಾ ಮಹಿಳಾ ಭಜನಾ ಮಂಡಳಿ ತೆಂಗಿನಗುಂಡಿ, ಗಾನಶ್ರೀ ಕಲಾ ತಂಡ ಭಟ್ಕಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬಂದರ, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಶಿರೂರು, ಸೀತಾರಾಮ ಭಜನಾ ಮಂಡಳಿ ಕರಿಕಲ್, ವಿಶ್ವದೀಪ ನಾದಾಮೃತ ಭಜನಾ ಮಂಡಳಿ ಮುಂಡಳ್ಳಿ ಮತ್ತಿತರರ ಭಜನಾ ಮಂಡಳಿಯವರು ಭಾಗವಹಿಸಿದ್ದರು. ಭಜನಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅರ್ಚಕರಾದ ವೇ.ಮೂ. ಶ್ರೀಪಾದ ಭಟ್ಟ, ಮಂಜುನಾಥ ಹೆಗಡೆ, ಭಜನಾ ಮಂಡಳಿಯ ದೀಪಕ್ ನಾಯ್ಕ, ಸಂತೋಷ ಶೇಟ್, ರಮೇಶ ಆಚಾರ್ಯ, ರಾಜು ನಾಯ್ಕ, ರಾಜೇಶ ಖಾರ್ವಿ, ಶ್ರೀಧರ ನಾಯ್ಕ, ದತ್ತಾತ್ರೇಯ ನಾಯ್ಕ, ವಿನಾಯಕ ನಾಯ್ಕ, ರಾಜಶೇಖರ ನಾಯ್ಕ, ನಾರಾಯಣ ನಾಯ್ಕ, ರಾಜಶೇಖರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.