Slide
Slide
Slide
previous arrow
next arrow

ಡಿ:16ಕ್ಕೆ ಜಿಲ್ಲಾ ಮಟ್ಟದ ಫೈಝಾನೆ ಮದೀನಾ ಸಮಾವೇಶ

300x250 AD

ದಾಂಡೇಲಿ : ನಗರದ ಸುಭಾಷ್ ನಗರದಲ್ಲಿರುವ ನೂರೇ ಇಸ್ಲಾಂ ರಿಲಿಜಿಯಸ್ ಮತ್ತು ಎಜುಕೇಶನ್ ಟ್ರಸ್ಟ್ ಇವರ ಆಶ್ರಯದಡಿ ಡಿಸೆಂಬರ್ 16 ರಂದು ಮುಸ್ಲಿಂ ಧರ್ಮ ಬಾಂಧವರ 15ನೇ ವಾರ್ಷಿಕ ಜಿಲ್ಲಾಮಟ್ಟದ ಫೈಝಾನೆ ಮದೀನಾ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನೂರೇ ಇಸ್ಲಾಂ ರಿಲಿಜಿಯಸ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಇಕ್ಬಾಲ್ ಶೇಕ್ ಅವರು ತಿಳಿಸಿದ್ದಾರೆ.

ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಿಸೆಂಬರ್ 16ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಕೇಶ ಪ್ರದರ್ಶನ ನಡೆಯಲಿದೆ.

ಆನಂತರ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಧರ್ಮ ಗುರುಗಳಾದ ಉತ್ತರ ಪ್ರದೇಶದ ಸೈಯದ್ ಮೊಹಮ್ಮದ್ ಕಾಸಿಂ ಅಷರಪೀ ಕಿಚೋಚಾ ಷರೀಫ್, ಒರಿಸ್ಸಾದ ಸೈಯದ್ ಅರಫೇ ರಸೋಲ್ ಭದರಕ್, ಬೆಂಗಳೂರಿನ ಮೌಲಾನ ನಾಸೀರ್ ರಜಾ ಖಾನ್, ಚಿತ್ರದುರ್ಗದ ಮೌಲಾನಾ ಸೈಯದ್ ಅನ್ಸರ್ ರಫಾಯಿ, ನಾಥಖಾಂ ಜನಾಬ ಶಬೀರ್ ಬರಕಾತಿ ಮೊದಲಾದವರು ಭಾಗವಹಿಸಿ, ಧಾರ್ಮಿಕ ಪ್ರವಚನವನ್ನು ನೀಡಲಿದ್ದಾರೆ.

300x250 AD

ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆ, ಸಚಿವರಾದ ಜಮೀರ್ ಅಹ್ಮದ್ ಖಾನ್ ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ರಾಜ್ಯಗಳ ಮುಸ್ಲಿಂ ಸಮಾಜದ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆ ಮಾತ್ರವಲ್ಲದೇ ದಾರವಾಡ, ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ದಾವಣಗೆರೆ ಜಿಲ್ಲೆ ಸೇರಿದಂತೆ ಗೋವಾ ರಾಜ್ಯದಿಂದಲೂ ಸರಿಸುಮಾರು ಹತ್ತರಿಂದ ಹನ್ನೆರಡು ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಇಕ್ಬಾಲ್ ಶೇಖ್ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಗರದ ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಉಪಾಧ್ಯಕ್ಷರಾದ ಗೌಸ್ ಖತೀಬ್, ಪ್ರಮುಖರಾದ ಆರ್.ಎ.ಖಾನ್, ದಾದಾಪೀರ್ ನದೀಮುಲ್ಲಾ, ರಾಜೇಸಾಬ್ ಸುಂಕದ, ಮುಸ್ತಾಕ್ ಜಾಲೇಗಾರ, ಸುಲೇಮಾನ್ ಶೇಖ, ಇಮ್ತಿಯಾಜ್ ಅತ್ತಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top