ಕಾರವಾರ: ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಹೊಸ ಉಪ್ಪು ನೀರಿನ ಕೋಳಗಳ ಸ್ಥಾಪನೆ, ಹೊಸ ಹಿನ್ನೀರು ಹ್ಯಾಚರಿ ಕೇಂದ್ರಗಳ ಸ್ಥಾಪನೆ, ಹಿನ್ನೀರು ಪ್ರದೇಶಗಳಲ್ಲಿ ಜಲಚರ ಸಾಕಣೆಗಾಗಿ ಹೊಸಕೊಳಗಳ ನಿರ್ಮಾಣ, ಬ್ಯಾಕಯಾರ್ಡ ಮಿನಿ ಆರ್.ಎ.ಎಸ್ ಘಟಕಗಳ ಸ್ಥಾಪನೆ, ಕಡಲ ಮೀನು ನರ್ಸರಿಗಳು, ಕಡಲ ಮೀನುಗಳ ದೊಡ್ಡ ಹ್ಯಾಚರಿ ಕೇಂದ್ರಗಳ ನಿರ್ಮಾಣ, ಮೊನೊಲಿನ ಟ್ಯೂಬ್ ನೆಟ್ ವಿಧಾನದೊಂದಿಗೆ ಕಡಲ ಕಳೆ ಸ್ಥಾಪನೆ, ಕಡಲ ಕಳೆ ಕೃಷಿಗೆ ರಾಫ್ಟ್ ಗಳ ಸ್ಥಾಪನೆ, ಹಿತ್ತಲಿನ ಅಲಂಕಾರಿಕ ಮೀನುಸಾಕಾಣಿಕೆ ಘಟಕ, ರಫ್ತು ಸಾಮರ್ಥ್ಯಕ್ಕಾಗಿ ಅಸ್ತಿತ್ವದಲ್ಲಿರುವ ಮೀನುಗಾರಿಕಾ ಹಡಗುಗಳ ಶ್ರೇಣಿಕರಣ, ಸಾಂಪ್ರದಾಯಿಕ ಮತ್ತು ಯಾಂತ್ರೀಕೃತ ಹಡಗುಗಳಿಗೆ ಸಂವಹನ ಮತ್ತು ಟ್ರ್ಯಾಕಿಂಗ್ ಸಾಧನಗಳು, ಯಾಂತ್ರಿಕೃತ ಮೀನುಗಾರಿಕಾ ಹಡಗುಗಳಲ್ಲಿ ಜೈವಿಕ ಶೌಚಾಲಯಗಳ ಸ್ಥಾಪನೆ ಸಹಾಯಧನ ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುತ್ತದೆ.
ಆಸಕ್ತ ಅರ್ಹ ಫಲಾನುಭವಿಗಳು ಡಿ.30 ರೊಳಗಾಗಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪ ನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.