Slide
Slide
Slide
previous arrow
next arrow

ಡಿ.8ಕ್ಕೆ ಭೈರುಂಬೆಯಲ್ಲಿ ‘ಆನಂದ-ಆರೋಗ್ಯ’ ಶೈಕ್ಷಣಿಕ ಪ್ರಾತ್ಯಕ್ಷಿಕೆ

300x250 AD

ಶಿರಸಿ: ತಾಲೂಕಿನ ಭೈರುಂಭೆಯ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ‘ಆನಂದ-ಆರೋಗ್ಯ’ ಎಂಬ ಶೈಕ್ಷಣಿಕ ಪ್ರಾತ್ಯಕ್ಷಿಕೆಯನ್ನು ಡಿ.8, ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಭೈರುಂಬೆಯ ಶಾರದಾಂಬಾ ಪ್ರೌಢಶಾಲಾ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಸಾಹಿತ್ಯ ಹಾಗೂ ನೃತ್ಯದ ಮೂಲಕ ಆರೋಗ್ಯ ಹಾಗೂ ಲಲಿತಕಲೆಗಳ ಸಂಬಂಧ ನಿರೂಪಿಸುವ ವಿನೂತನ ಕಾರ್ಯಕ್ರಮವನ್ನು ಮನೋವೈದ್ಯೆ, ನೃತ್ಯಗುರು, ಸಂಶೋಧಕಿ ಡಾ.ಕೆ.ಎಸ್.ಪವಿತ್ರಾ ನಡೆಸಿಕೊಡಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಚಂದಗಾಣಿಸಿಕೊಡಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top