Slide
Slide
Slide
previous arrow
next arrow

ದಾಂಡೇಲಿ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಉದ್ಘಾಟನೆ

300x250 AD

ದಾಂಡೇಲಿ: ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ರಚನಗೊಂಡ ತಾಲೂಕು ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಉದ್ಘಾಟನೆಯು ನಗರದ ಮರಾಠಾ ಸಮಾಜ ಭವನದಲ್ಲಿ ಜರುಗಿತು.

ಬೀದಿಬದಿ ವ್ಯಾಪಾರಿಗಳ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ನಗರದ ಹಿರಿಯ ಮುಖಂಡರಾದ ವಾಸುದೇವ ಪ್ರಭು ಅವರು ಶ್ರಮವಹಿಸಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ಬೀದಿಬದಿ ವ್ಯಾಪಾರಸ್ಥರು ಸಂಘಟಿತರಾಗಬೇಕು. ಬೀದಿಬದಿ ವ್ಯಾಪಾರಿಗಳಿಗೆ ಆಗುತ್ತಿರುವ ಸಮಸ್ಯೆಗಳು, ತೊಂದರೆಗಳನ್ನು ಮುಕ್ತವಾಗಿ ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಒಕ್ಕೂಟ ಸಹಕಾರಿಯಾಗಲಿ ಎಂದರು.

ನಗರಸಭೆಯ ಹಿರಿಯ ಸದಸ್ಯೆ ಯಾಸ್ಮಿನ್ ಕಿತ್ತೂರ್, ಬೀದಿಬದಿ ವ್ಯಾಪಾರಸ್ಥರಲ್ಲಿಯೂ ಸಂಘಟನೆ ಇರಬೇಕು. ಸಂಘಟನೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ವಿಶೇಷ ಆದ್ಯತೆಯನ್ನು ನೀಡಬೇಕು. ಸಂಘಟನೆ ಸಮಾಜಮುಖಿ ಇದ್ದಾಗ, ಸಂಘ ಸದೃಢವಾಗಲು ಸಾಧ್ಯವಿದೆ ಎಂದರು. ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಬ್ಬಾಸ್ ಮುಲ್ಲಾ ಮಾತನಾಡಿ, ಪ್ರತಿನಿತ್ಯ ಸಮಸ್ಯೆಗಳ ಮೂಲಕವೇ ಸಣ್ಣಪುಟ್ಟ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರು ಬೀದಿಬದಿ ವ್ಯಾಪಾರಿಗಳು. ಬೆವರು ಸುರಿಸಿ ಕಷ್ಟ್ಟಪಟ್ಟು ದುಡಿದು ಸಂಪಾದಿಸಿ ಬದುಕನ್ನು ಕಟ್ಟಿಕೊಳ್ಳುವ ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸರಕಾರ ಉಪಯುಕ್ತ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಕರೆ ನೀಡಿ ಸಂಘಟನೆಯು ಸಂಘದ ಸರ್ವ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಸದಾ ಐಕ್ಯತೆಯನ್ನು ಮೆರೆಯಲಿ ಎಂದರು.

300x250 AD

ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಿಲೇಮಾನ್ ಸೈಪುದ್ದೀನ್ ಶೇಖ ಅವರು ನಾವೆಲ್ಲ ಬೀದಿಬದಿ ವ್ಯಾಪಾರಸ್ಥರು ಸರಕಾರದ ನಿಯಮಾವಳಿಯಂತೆ ಸಣ್ಣ ಪುಟ್ಟ ವ್ಯಾಪಾರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಶ್ರಮ ಜೀವನಕ್ಕೆ ಸರ್ವರ ಸಹಕಾರವಿರಲೆಂದು ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಬೀಸಾಬ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಸದಸ್ಯರಾದ ಮುಸ್ತಾಕ್ ಶೇಖ್ ಐವಾ, ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಾಬಾಸಾಬ್ ಜಮಾದಾರ್, ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಕಾರವಾರ ತಾಲೂಕು ಘಟಕದ ಅಧ್ಯಕ್ಷರಾದ ಫಕೀರಪ್ಪ ಭಂಡಾರಿ, ಪ್ರಮುಖರಾದ ಇಬ್ರಾಹಿಂ ಕಾಕರ್, ನಬೀಸಾಬ್ ಹುನುಗುಂದ, ದಾವಲ್ ಸಾಬ್ ನೀರಲಗಿ, ಅಸ್ಲಾಂ ಜಮಾದಾರ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಶ್ರಮಜೀವಿಗಳನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಪ್ರಕಾಶ್ ವಿಟ್ಟಲ್ ಗೊಂದಳಿ ಅವರು ಸ್ವಾಗತಿಸಿದರು. ಗೌರೀಶ್ ದೇಸಾಯಿ ವಂದಿಸಿದರು. ವಿನೋದ್ ಪೊರೆ ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top