ಯಲ್ಲಾಪುರ: ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಲವಳ್ಳಿ ಸಮೀಪದ ಸೂರ್ಯಕಲ್ಯಾಣಿ ಗುಡ್ಡಕ್ಕೆ ಚಾರಣ
ಕಾರ್ಯಕ್ರಮ ರವಿವಾರ ಸಂಜೆ ನಡೆಯಿತು.
ಸುಮಾರು 30 ಜನರು ಚಾರಣದಲ್ಲಿ ಭಾಗವಹಿಸಿದ್ದರು.
ಸೂರ್ಯಕಲ್ಯಾಣಿ ಗುಡ್ಡದ ಮೇಲೆ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಸವಿದರು. ಇಲ್ಲಿ ನಿಂತರೆ ಸುಂಕಸಾಳ, ಕಮ್ಮಾಣಿ ಮತ್ತು ಗೋಕರ್ಣದ ವಿಹಂಗಮ ನೋಟ ಕಾಣಸಿಗಲಿದ್ದು, ತಂಗಾಳಿಗೆ ಮೈಯೊಡ್ಡಿ ಸೂರ್ಯಾಸ್ತವನ್ನು ಚಾರಣಿಗರು ಕಣ್ತುಂಬಿಕೊಂಡರು.
ನಿವೃತ್ತ ಶಿಕ್ಷಕ ಡಿ.ಜಿ.ಭಟ್ಟ, ನಿವೃತ್ತ ತಹಸೀಲ್ದಾರ ಡಿ.ಜಿ.ಹೆಗಡೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ಅಧ್ಯಕ್ಷ ಗಣಪತಿ ಕಂಚಿಪಾಲ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುಬ್ಬಣ್ಣ ಬೊಳ್ಮನೆ, ಪ್ರಮುಖರಾದ ಸುದರ್ಶನ, ಗೋಡೆಪಾಲ ನಾರಾಯಣ, ಜಿ.ಕೆ.ಭಟ್ಟ ಮಲವಳ್ಳಿ, ನವೀನಕುಮಾರ ಭಾಗವಹಿಸಿದ್ದರು.
ಕೀರ್ತನಾಕಾರ ಈಶ್ವರ ದಾಸ ಕೊಪ್ಪೆಸರ ಪ್ರವಚನ, ರಮಾ ಅಚ್ಯುತಕುಮಾರ ಮತ್ತು ರೇಖಾ ಭಟ್ಟರ ಗಾಯನ, ಉಪನ್ಯಾಸ, ಕವಿಗೋಷ್ಠಿ ನಡೆಯಿತು.