ಅಂಕೋಲಾ: ಹಲವು ವರ್ಷಗಳಿಂದ ಪಟ್ಟಣದಲ್ಲಿ ನಡೆಯುತ್ತಿರುವ ಬಹುಸಂಖ್ಯಾತ ನಾಮಧಾರಿ ದಹಿಂಕಾಲ ಉತ್ಸವ ಇದೆ ಬರುವ ಡಿ.7 ರಂದು ಜರುಗಲಿದ್ದು, ಸರ್ವರನ್ನು ಸ್ವಾಗತಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ಪಟ್ಟಣ ಸೇರಿದಂತೆ ಹಲವು ಗ್ರಾಮಗಳಿಗೆ ಬೈಕ್ ಸವಾರರು ತೆರಳಿ, ದಹಿಂಕಾಲ ಉತ್ಸವಕ್ಕೆ ಸ್ವಾಗತ ಕೋರಿದರು. ತಾಲೂಕಿನಲ್ಲಿಯೇ ಇದು ವಿಶೇಷ ಉತ್ಸವವಾಗಿದೆ. ಸಹಸ್ರ ಸಹಸ್ರ ಭಕ್ತಾದಿಗಳ ಕೂಡುವಿಕೆಯಲ್ಲಿ ಈ ಉತ್ಸವ ಪ್ರತಿವರ್ಷ ನಡೆಯುತ್ತಿದ್ದು, ಇದರ ಪ್ರಯುಕ್ತ ಹಮ್ಮಿಕೊಂಡ ಬೈಕ್ ರ್ಯಾಲಿ ಪಟ್ಟಣದಲ್ಲಿ ಉತ್ಸವದ ಮೆರಗನ್ನು ಹೆಚ್ಚಿಸಿತ್ತು.
ಈ ವರ್ಷದ ದಹಿಂಕಾಲ ಉತ್ಸವ ಸಮೀತಿ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ವಿನಾಯಕ ನಾಯ್ಕ ಸೇರಿದಂತೆ ಪಧಾದಿಕಾರಿಗಳು, ಸದಸ್ಯರು ಇದ್ದರು.