ಕಾರವಾರ: ಪರಿಶಿಷ್ಟ ಸಮುದಾಯದ ಏಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಕರ್ನಾಟಕ ರಾಜ್ಯ ಸಮಗಾರ, ಹರಳಯ್ಯ ಸಂಘಕ್ಕೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಹಾಗೂ ಕಾರವಾರ ಶಾಖೆಯ ಸರ್ವ ಸದಸ್ಯರ ಸಭೆ ಮತ್ತು ಸದಸ್ಯತ್ವ ಸಭೆಯನ್ನ ಉದ್ಘಾಟಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ದಲಿತರ ಏಳಿಗೆಗೆ ಸಾಕಷ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು. ದಲಿತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಿ ದಲಿತರು ಆರ್ಥಿಕವಾಗಿ ಮೇಲಕ್ಕೆ ತರಲು ಪ್ರಯತ್ನಿಸಿದರು. ಇಷ್ಟೇ ಅಲ್ಲದೇ ನಾನಾ ಕಾರ್ಯಕ್ರಮ ಜಾರಿ ಮಾಡಿದ್ದು, ಈವರೆಗೆ ರಾಜ್ಯದಲ್ಲಿ ಯಾರು ಸಹ ಇಷ್ಟೊಂದು ಕೆಲಸ ಮಾಡಿರಲಿಲ್ಲ ಎಂದರು.
ಸರ್ಕಾರದ ಮಟ್ಟಿಗೆ ಸಮಗಾರ, ಹರಳಯ್ಯ ಸಮುದಾಯದ ಪರ ಧ್ವನಿ ಯಾಗುವಂತೆ ಸಮಾಜದವರು ಮನವಿ ಮಾಡಿದ್ದಾರೆ. ತಾನು ಸಮುದಾಯದ ಏಳಿಗೆಗೆ ಸಹಾಯ ಮಾಡಲು ಶ್ರಮಿಸುವುದಾಗಿ ಶಾಸಕ ಸತೀಶ್ ಸೈಲ್ ಹೇಳಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪರಶುರಾಮ ಮಾತನಾಡಿ, ಸಣ್ಣ ಸಣ್ಣ ಸಮುದಾಯಗಳು ನಿಗಮ ಮಂಡಳಿ ಮಾಡಲಾಗಿದೆ. ಆದರೆ ದೊಡ್ಡ ಸಮುದಾಯವಾದರು ಈ ವರೆಗೆ ನಿಗಮ ಮಾಡಿಲ್ಲ. ಆದರೂ ಯಾರು ಧ್ವನಿ ಎತ್ತುತ್ತಿಲ್ಲ. ಎಲ್ಲರೂ ಸಮಾಜಕ್ಕೆ ಸವಲತ್ತನ್ನ ಸಿಗಲು ಸರ್ಕಾರದ ಬಳಿ ಧ್ವನಿಯಾಗಬೇಕು ಎಂದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುನೀಲ್ ಮದನಬಾವಿ, ರಾಜ್ಯದಲ್ಲಿ ಸಂಘಕ್ಕೆ ಸದಸ್ಯರನ್ನ ಮಾಡಲು ಎಲ್ಲಾ ಜಿಲ್ಲೆಗಳಿಗೆ ತಿರುಗಾಟ ಮಾಡಲಾಗುತ್ತಿದೆ. ಎಲ್ಲಾ ಕಡೆ ಉತ್ತಮ ಬೆಂಬಲ ಸಿಕ್ಕಿದೆ. ಕಾರವಾರದಲ್ಲಿ ಉತ್ತಮ ಸಂಘಟನೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿಯನ್ನ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ದೀಪಕ್ ಕುಡಾಲಕರ್ ಮಾಡಿದರು. ಇದೇ ವೇಳೆ ಸಮುದಾಯದ ಹಿರಿಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್, ಖಜಾಂಚಿ ಮಂಜುನಾಥ, ನಂದನ ಬೋರ್ಕರ್, ಭೀಮರಾವ್ ಕಟ್ಟಿಮನಿ, ವಾಸು ಸೇರಿದಂತೆ ಹಲವರು ಉಪಸ್ಥಿತರಿದ್ದರು.