Slide
Slide
Slide
previous arrow
next arrow

ಮಕ್ಕಳಲ್ಲಿ ವ್ಯಾಪಾರ ವಹಿವಾಟುಗಳ ಜ್ಞಾನ ತುಂಬಲು ಮಕ್ಕಳ ಸಂತೆ ಸಹಕಾರಿ

300x250 AD

ಅಂಕೋಲಾ: ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಅತ್ಯಂತ ಆಕರ್ಷಣೆಯಿಂದ ಜರುಗಿತು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಗಾಂವಕರ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶುಭ ಹಾರೈಸಿ, ಪ್ರೋತ್ಸಾಹ ನೀಡಿದ ಶಿಕ್ಷಕ ಮತ್ತು ಪಾಲಕರಿಗೂ ಅಭಿನಂದಿಸಿದರು.

ಹಿರಿಯ ಸಾಹಿತಿ ಲಯನ್ ಮಹಾಂತೇಶ ರೇವಡಿ ಮಾತನಾಡಿ, ಮಕ್ಕಳಲ್ಲಿ ವ್ಯಾಪಾರ ವಹಿವಾಟುಗಳ ಜ್ಞಾನವನ್ನು ತುಂಬಲು ಇಂತಹ ಮಕ್ಕಳ ಸಂತೆ ಸಹಕಾರಿಯಾಗುತ್ತದೆ ಹಾಗೂ ಶಿಕ್ಷಣದ ಜೊತೆಗೆ ಇಂತಹ ಚಟುವಟಿಕೆಗಳಲ್ಲಿ ತೊಡಗಿ ಮಕ್ಕಳು ಮಾನಸಿಕವಾಗಿ ಉಲ್ಲಸಿತರಾಗಲು ಸಹಾಯವಾಗುತ್ತದೆ ಎಂದರು.

300x250 AD

ಈ ಸಂದರ್ಭದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ ನಾಯಕ, ಸಾಮಾಜಿಕ ಕಾರ್ಯಕರ್ತ ನವಾಜ ಶೇಖ, ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಇಲಿಯಾಸ್ ಪೀರಜಾದೆ, ಸದಸ್ಯರಾದ ಅಫ್ಜಲ್ ಶೇಖ, ಇಮ್ತಿಯಾಜ ಸಯ್ಯದ್, ಫೈರೋಜ ಖಾನ, ಮುಖ್ಯಾಧ್ಯಾಪಕಿ ಶಮೀಮ ಬಾನು ಜೈಲರ, ಶಿಕ್ಷಕ ಆನಂದು ನಾಯ್ಕ, ಅಬ್ದುಲ ಮಜೀದ, ಮುಸ್ತಾಕ ಶೇಖ, ತಬುಸುಮಶೇಖ, ಶಿರೀನ ಶೇಖ, ನಿವೃತ್ತ ಮುಖ್ಯಾಧ್ಯಾಪಕ ಲತೀಫ ಶೇಖ, ನಸರೀನಶೇಖ ಇನ್ನಿತರರು ಇದ್ದರು. ಶಿಕ್ಷಕ ಆನಂದು ನಾಯ್ಕ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ರಫೀಕ ಶೇಖ ಸಂಘಟನೆಗೆ ಸಹಕರಿಸಿದರು.

Share This
300x250 AD
300x250 AD
300x250 AD
Back to top