ಕಾರವಾರ: ವಿಶ್ವ ಮೀನುಗಾರಿಕಾ ದಿನಾಚರಣೆ ಪ್ರಯುಕ್ತ ನಗರದಲ್ಲಿ ಮಂಗಳವಾರ ವಿಶ್ವ ಮೀನುಗಾರಿಕಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ರೂಪಾಲಿ ಎಸ್ ನಾಯ್ಕ ಮಾತನಾಡಿ ಮೀನುಗಾರರ ಕಷ್ಟ, ನೋವು ಅವರ ಪರಿಶ್ರಮ ಬಹಳ ಹತ್ತಿರದಿಂದ ನೋಡಿದ್ದೇನೆ. ಯಾಕೆಂದರೆ ನಾನು ಕೂಡ ಮೀನುಗಾರರ ಕುಟುಂಬದಿಂದ ಬಂದವಳು ಎಂದರು.
ಚಿಕ್ಕಂದಿನಲ್ಲಿ ನನ್ನ ತಂದೆಯವರ ಜೊತೆಯಲ್ಲಿ ನಾನು ಮೀನು ವ್ಯಾಪಾರಕ್ಕೆ ಹೋಗುತ್ತಿದ್ದೆ. ಮೀನುಗಾರ ಮಹಿಳೆಯರು ತುಂಬಾ ಪ್ರೀತಿಯಿಂದ ನನ್ನ ಮಾತನಾಡಿಸುತ್ತಿದ್ದರು. ನನ್ನಗೂ ಅವರು ಎಂದರೆ ತುಂಬಾ ಪ್ರೀತಿ. ಮೀನುಗಾರರು ಎಂದಿಗೂ ಒಗ್ಗಟಿನಿಂದ ಇರಬೇಕು. ಯಾವುದೇ ಸರಕಾರ ಇರಲಿ ಮುಖಂಡರು ಗಟ್ಟಿಯಾಗಿ ನಿಂತು ಸಮಾಜದವರಿಗೆ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು ಎಂದರು. ಇದೇ ವೇಳೆ ಸಮಸ್ತ ಮೀನುಗಾರರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಮೀನುಗಾರರ ಮುಖಂಡರು, ಮೀನುಗಾರು ಮಹಿಳೆಯರು ಹಾಗೂ ಅನೇಕ ಮೀನುಗಾರರು ಉಪಸ್ಥಿತರಿದ್ದರು.