ಸಿದ್ದಾಪುರ: ಸಮಾಜದವರೆಲ್ಲ ಒಟ್ಟಾಗಿ ನಿಂತುಕೊಂಡರೆ ಒಳ್ಳೆ ಸಹಕಾರ ಸಿಕ್ಕಿದರೆ ಸಮಾಜ ಸಂಘಟನೆಗೆ ದೊಡ್ಡ ಶಕ್ತಿ ದೊರಕುತ್ತದೆ. ಸಮಾಜ ಸಂಘಟನೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಯೋಗೇಂದ್ರ ಸ್ವಾಮೀಜಿ ಆಶೀರ್ವಚನ ಕರೆನೀಡಿದರು.
ಅವರು ಶ್ರೀ ಸಂಸ್ಥಾನ ತರಳಿ ಮಠದ ಸಭಾಂಗಣದಲ್ಲಿ ತರಳಿ ಮಠದ ಸೇವಾದಳ ಘಟಕದ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಯುವಕರು, ಮುಖಂಡರು ನಿರಾಶರಾಗಬೇಡಿ. ಎಲ್ಲರಿಗೂ ಬೆಳೆಯಲು ಅವಕಾಶವನ್ನು ಮಾಡಿಕೊಡಿ. ಒಬ್ಬ ವ್ಯಕ್ತಿಯನ್ನು ನಾವು ಬೆಳೆಸಿದೆವೆಂದರೆ ಅವರು ಮುಂದೊಂದು ದಿನ ಸಮಾಜಕ್ಕೆ ಶಕ್ತಿಯಾಗುತ್ತಾರೆ ಎನ್ನುವಂತಹ ನಂಬಿಕೆ ನನಗಿದೆ ಎಂದರು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎನ್.ಡಿ.ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಕೀಲ ಜಿ.ಟಿ.ನಾಯ್ಕ್, ತರಳಿ ಸೇವಾದಳ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ನಾಯ್ಕ್, ಮುಖಂಡ ಈಶ್ವರ್ ನಾಯ್ಕ್ ಭಟ್ಕಳ ಉಪಸ್ಥಿತರಿದ್ದರು. ಚಂದ್ರಹಾಸ್ ಪ್ರಾರ್ಥಿಸಿದರು. ಎನ್.ಟಿ.ನಾಯ್ಕ್ ನಿರೂಪಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಎಸ್.ಎಚ್.ನಾಯ್ಕ್ ವಂದಿಸಿದರು.