ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಸ್ನಾತಕೋತ್ತರ (ಎಂಟೆಕ್.) ವಿದ್ಯಾರ್ಥಿಗಳು ದಾಂಡೇಲಿಯ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಗೆ ಭೇಟಿ ನೀಡಿದರು.
ಕಾಗದ ಕಾರ್ಖಾನೆಯಲ್ಲಿ ಶಕ್ತಿಯ ಸದ್ಬಳಕೆಗೆ ತೆಗೆದುಕೊಂಡಿರುವ ಉಪಕ್ರಮಗಳು, ವಿವಿಧ ಪ್ರಕ್ರಿಯಾ ಹಂತದಲ್ಲಿ ವಿದ್ಯುತ್ ಚಾಲಿತ ಮೋಟಾರ್ ಗಳ ನಿಯಂತ್ರಣಕ್ಕೆ ಬಳಸಲಾಗುತ್ತಿರುವ ನೂತನ ತಂತ್ರಜ್ಞಾನದ ಮಾಹಿತಿ ಪಡೆದುಕೊಂಡರು. ಕಾರ್ಖಾನೆಯಲ್ಲಿ ಅವಘಡಗಳ ತಡೆಯುವಿಕೆಗೆ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳನ್ನು ಸುರಕ್ಷತಾ ಅಧಿಕಾರಿ ವಿಘ್ನೇಶ್ ವಿವರಿಸಿದರು. ಕಾರ್ಖಾನೆಯು ಪರಿಸರ ಮಾಲಿನ್ಯವನ್ನು ತಗ್ಗಿಸಿ ಹಸಿರು ಪರಿಸರ ನಿರ್ಮಾಣಕ್ಕೆ ತೆಗೆದುಕೊಂಡಿರುವ ಯೋಜನೆಗಳನ್ನು ವಿವರಿಸಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ ಮಹೇಂದ್ರ ದೀಕ್ಷಿತ್ ಮಾರ್ಗದರ್ಶನದಲ್ಲಿ ಪ್ರೊ. ಅವಿನಾಶ್ ಜೋಶಿ ಮತ್ತು ಪ್ರೊ.ಶೀತಲ್ ಮಿಂಡೋಳ್ಕರ್ ಮತ್ತು ವಿದ್ಯಾರ್ಥಿಗಳು ಕಾಗದ ಕಾರ್ಖಾನೆಗೆ ಭೇಟಿ ನೀಡಿದ್ದರು. ಕೈಗಾರಿಕಾ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ನೂತನ ತಂತ್ರಜ್ಞಾನದ ಕುರಿತು ಅರಿವು ಹೊಂದಲು ಮತ್ತು ಕೈಗಾರಿಕಾ ವಲಯದ ಕಾರ್ಯವೈಖರಿ ತಿಳಿದುಕೊಳ್ಳಲು ಈ ಭೇಟಿ ಸಹಕಾರಿಯಾಗುವುದೆಂದು ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ