ಯಲ್ಲಾಪುರ: ತಾಲೂಕಿನ ಬೊಮ್ಮಡಿಕೊಪ್ಪದ ಮಹಿಳೆ ಹಾಗೂ ಆಕೆಯ ಮಗ ಕಾಣೆಯಾದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಮ್ಮಡಿಕೊಪ್ಪದ ಭಾಗಿ ಲಕ್ಷ್ಮಣ ಪಟಕಾರೆ ಹಾಗೂ ಆಕೆಯ ಮಗ 3 ವರ್ಷದ ಸತೀಶ ಲಕ್ಷ್ಮಣ ಪಟಕಾರೆ ಕಾಣೆಯಾದವರು. ಕಳೆದ ನ.11ರಂದು ತನ್ನ ಮಗನೊಂದಿಗೆ ಸಂಬಂಧಿಕರ ಮನೆಗೆ ಹೋಗುತ್ತೇನೆಂದು ಹೋದ ಈಕೆ, ಸಂಬಂಧಿಕರ ಮನೆಗೂ ಹೋಗದೇ, ಮನೆಗೂ ಮರಳಿ ಬಾರದೇ ಕಾಣೆಯಾಗಿದ್ದಾರೆಂದು ಪತಿ ಲಕ್ಷ್ಮಣ ಪಟಕಾರೆ ದೂರು ನೀಡಿದ್ದಾರೆ.