ಸಿದ್ದಪುರ: ಶ್ರೀ ರಾಮಕೃಷ್ಣ ವಿದ್ಯಾಶಾಲಾ ಮೈಸೂರು ಇವರು ನಡೆಸಿದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ ಸಿದ್ದಾಪುರ ತಾಲೂಕಿನ ಎಸ್.ಆರ್.ಜಿ.ಎಚ್.ಎಂ ಬಾಲಕಿಯರ ಪ್ರೌಢಶಾಲೆಯಲ್ಲಿ ನೆರವೇರಿತು.
ತದನಂತರ ಸಮಾರೋಪ ಸಮಾರಂಭವು ಚೇತನಾ ಪದವಿಪೂರ್ವ ಕಾಲೇಜಿನಲ್ಲಿ ಅದ್ಧೂರಿಯಾಗಿ ನಡೆಯಿತು. ಒಟ್ಟು 300 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು 9 ನೇ ತರಗತಿಯ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಮತ್ತು 10 ನೇ ತರಗತಿಯ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಮತ್ತು ಅತ್ಯುತ್ತಮ ಶಾಲಾ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಬಾಚಿಕೊಂಡಿದ್ದರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಡಾ. ಶಶಿಭೂಷಣ ವಿ ಹೆಗಡೆ ವಹಿಸಿದ್ದರು, ವಿದ್ಯಾರ್ಥಿಗೆ ವಿವೇಕಾನಂದರ ತತ್ವಗಳನ್ನ ಅಳವಡಿಸಿಕೊಳ್ಳಲು ಕರೆ ನೀಡಿದರು. ಚೇತನಾ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕರಾದ ಎಂ.ಎಸ್.ಭಟ್ ಪ್ರಾಸ್ತಾವಿಕ ಮಾತನಾಡಿದರು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊ.ಜಗನ್ನಾಥ ಮೊಗೇರ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನಾದರ್ಶದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಫ್.ಎನ್.ಹರನಗಿರಿ ಸ್ವಾಗತಿಸಿದರು. ಆರ್.ಎಚ್.ಪಾಲೇಕರ ವಂದನಾರ್ಪಣೆ ಮಾಡಿದರು. ವಿನೋದಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.