ಶಿರಸಿ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎರಡು ಮೆಡಿಕಲ್ ಕಾಲೇಜು ನಿರ್ಮಿಸಲು ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಶನಿವಾರ ಮುಂಜಾನೆ ದೇವಿಮನೆಯಿಂದ ಮೂರನೇ ದಿನಕ್ಕೆ ಪಾದಾರ್ಪಣೆ ಮಾಡಿದೆ.
ಪಾದಯಾತ್ರೆಯ 2 ದಿನವಾದ ಶುಕ್ರವಾರ ಕೋಳಗೀಬೀಸ್‌ನಿಂದ ದೇವಿಮನೆ ತಲುಪಿದ್ದು, ದಾರಿಯುದ್ದಕ್ಕೂ ಜನರ ಅಪಾರ ಬೆಂಬಲ ವ್ಯಕ್ತವಾಗಿದೆ. ತಾಲೂಕಿನ ಅಮ್ಮಿನಳ್ಳಿ, ಮಂಜುಗುಣಿ, ಬಂಡಲ ಹಾಗೂ ರಾಗಿಹೊಸಳ್ಳಿಗಳಲ್ಲಿ ಸ್ಥಳೀಯರು ಆತ್ಮೀಯ ಸ್ವಾಗತ ಕೋರಿದ್ದು, ಪಾದಯಾತ್ರೆಗೆ ಅಪಾರ ಬೆಂಬಲ ವ್ಯಕ್ತಪಡಿಸಿ, ಪಾದಯಾತ್ರೆ ಜೊತೆ ಹೆಜ್ಜೆ ಹಾಕಿದ್ದಾರೆ.
ಶನಿವಾರ ಮುಂಜಾನೆ ದೇವಿಮನೆಯಿಂದ ಹೊರಟ ಪಾದಯಾತ್ರೆಗೆ ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಹಾಗೂ ಜಿ.ಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕ ಹಾಗೂ ಮನು ವಿಕಾಸ ಸಂಸ್ಥೆಯ ನಿದೇರ್ಶಕ ಗಣಪತಿ ಭಟ್ಟ ಸೇರಿದಂತೆ ಹಲವರು ಬೆಂಬಲ ಘೋಷಿಸಿ, ಹೆಜ್ಜೆ ಹಾಕಿದ್ದಾರೆ.