ಜೊಯಿಡಾ: ತಾಲೂಕಿನ ಜೊಯಿಡಾ ಸೇವಾ ಸಹಕಾರಿ ಸಂಘದಲ್ಲಿ 12 ಕೋಟಿ ಅವ್ಯವಹಾರ ನಡೆದ ಬಗ್ಗೆ ಸರಿಯಾಗಿ ತನಿಖೆ ನಡೆಯತ್ತಿಲ್ಲ. ಕೂಡಲೇ ಈ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು ಎಂದು ವಿವಿಧ ಸಂಘಟನೆಗಳು ಮತ್ತು ಸ್ಥಳೀಯರು ಇಂದು ರಸ್ತಾರೋಖೋ ಹಾಗೂ ಜೊಯಿಡಾ ಬಂದ್ಗೆ ಕರೆನೀಡಿದ್ದಾರೆ.
ಜೊಯಿಡಾ ಸಹಕಾರಿ ಸಂಘದಲ್ಲಿ 12 ಕೋಟಿ ಅವ್ಯವಹಾರ ನಡೆದಿದೆ. ಈ ಹಿಂದೆಯಿ0ದಲೂ ಸಹಕಾರಿ ಸಂಘದ ಅಧಿಕಾರಿಯಾಗಿದ್ದ ಎಸ್.ಪಿ.ಸಜ್ಜನ ಅವರನ್ನೇ ತನಿಖಾಧಿಕಾರಿಯಾಗಿ ಒಪ್ಪಿಸಿರುವುದು ಎಷ್ಟರ ಮಟ್ಟಿಗೆ ಸರಿ? ಕೂಡಲೇ ಈ ಅವ್ಯವಹಾರದ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು. ಬಡಜನರ ದುಡ್ಡು ತಿಂದವರನ್ನು ಸುಮ್ಮನೆ ಬಿಡಬಾರದು. ಸರ್ಕಾರ ಈ ಬಗ್ಗೆ ಕೂಡಲೇ ಲಕ್ಷ್ಯ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊಯಿಡಾ ಸಹಕಾರಿ ಸಂಘದಲ್ಲಿ ಜನ ಇಟ್ಟ ಹಣ ವಾಪಸ್ಸು ಸಿಗುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.