Slide
Slide
Slide
previous arrow
next arrow

ನ.1ಕ್ಕೆ ‘ದೇವದೀಪ’ ಕವನ ಸಂಕಲನ ಅನಾವರಣ

300x250 AD

ಕುಮಟಾ: ನಾಡಿನ ಪ್ರತಿಭಾನ್ವಿತ ಕವಿ ಗಣಪತಿ ಕೊಂಡದಕುಳಿಯವರ ಚತುರ್ಥ ಕೃತಿಯಾದ ‘ದೇವದೀಪ’ ಕವನ ಸಂಕಲನವು ನ.1ರ ಸಂಜೆ 4ಕ್ಕೆ ನಗರದ ‘ನಾದಶ್ರೀ’ ಕಲಾಕೇಂದ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ.

‘ಕನ್ನಡ ಚಂದ್ರಮ’ ಉತ್ತರ ಕನ್ನಡವು ಪ್ರಕಾಶಿಸಿದ ‘ದೇವದೀಪ’ ಕವನ ಸಂಕಲನವನ್ನು ಕುಮಟಾದ ರೋಟರಿ ಕ್ಲಬ್‌ನ ಸಹಯೋಗದೊಂದಿಗೆ ಸಂಘಟಿಸಿದ ಸಮಾರಂಭದಲ್ಲಿ ನಾಮಾಂಕಿತ ವಿಶ್ರಾಂತ ಪ್ರಾಚಾರ್ಯರಾದ ಡಾ. ಮಹೇಶ ಅಡ್ಕೋಳಿಯವರು ಲೋಕಾರ್ಪಣೆಗೊಳಿಸಿ ಮಾತನಾಡಲಿದ್ದಾರೆ. ಉದಯೋನ್ಮುಖ-ವಾಗ್ಮಿ ವಿಷ್ಣು ಪಟಗಾರರವರು ಕೃತಿಯನ್ನು ಪರಿಚಯಿಸಲಿದ್ದು, ಕನ್ನಡ ಚಂದ್ರಮದ ಸಂಸ್ಥಾಪಕ- ಗೌರವಾಧ್ಯಕ್ಷರಾದ ಮಂಜುನಾಥ ಗಾಂವ್ಕರ್ ಬರ್ಗಿ ಅವರು ಆಶಯ ನುಡಿಯನ್ನಾಡಲಿದ್ದಾರೆ. ರೋಟರಿ ಕ್ಲಬ್‌ನ ಅಧ್ಯಕ್ಷರಾದ ಎನ್.ಆರ್. ಗಜು ಅವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದು, ಹಿರಿಯ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಹಾಗೂ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಅವರು ಅಭ್ಯಾಗತರಾಗಿ ಪಾಲ್ಗೊಳ್ಳಲಿರುವರು. ಸಾಹಿತ್ಯಾಸಕ್ತರು ಬಹುಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸುವಂತೆ ಸಂಘಟಕರಾದ ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ರಾಮದಾಸ ಗುನಗಿಯವರು ಜಂಟಿಯಾಗಿ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top